ಭಾರತ, ಮಾರ್ಚ್ 11 -- ಹೊಸ ಧಾರಾವಾಹಿ ಬರುವ ಸಮಯದಲ್ಲಿ ಯಾವ ಧಾರಾವಾಹಿ ಕೊನೆಗೊಳ್ಳುತ್ತದೆ ಎಂಬ ಪ್ರಶ್ನೆ ಎದುರಾಗುತ್ತದೆ. ಯಾಕೆಂದರೆ, ಸೀರಿಯಲ್‌ ಟೈಮ್‌ ಸ್ಲಾಟ್‌ಗೆ ತಕ್ಕಂತೆ ಒಂದು ಧಾರಾವಾಹಿ ದಾರಿ ಬಿಟ್ಟುಕೊಡಲೇಬೇಕು. ಜೀ ಕನ್ನಡ ವಾಹಿನಿಯಲ್ಲಿ ಹೊಸ ಸೀರಿಯಲ್‌ ಆಗಮಿಸುವ ಸುದ್ದಿ ಬಂದಿದೆ. ಕಿರಣ್‌ ರಾಜ್‌ ನಟನೆಯ ಈ ಸೀರಿಯಲ್‌ ಬರುವ ಸಮಯದಲ್ಲಿ ಯಾವ ಸೀರಿಯಲ್‌ ಮುಗಿಯಲಿದೆ ಎಂಬ ಪ್ರಶ್ನೆ ಎದುರಾಗಿದೆ. ಪುಟ್ಟಕ್ಕನ ಮಕ್ಕಳು, ಸೀತಾರಾಮ ಸೇರಿದಂತೆ ಯಾವ ಸೀರಿಯಲ್‌ ಕೊನೆಯಾಗಲಿದೆ ಎಂದು ಪ್ರೇಕ್ಷಕರು ಚರ್ಚಿಸುತ್ತಿದ್ದಾರೆ. ಯಾವ ಟೈಮ್‌ ಸ್ಲಾಟ್‌ನಲ್ಲಿ ಕಿರಣ್‌ ರಾಜ್‌ ನಟನೆಯ ಕರ್ಣ ಸೀರಿಯಲ್‌ ಬರಲಿದೆ ಎನ್ನುವುದೂ ಇನ್ನಷ್ಟೇ ತಿಳಿದುಬರಬೇಕಿದೆ.

ಕರ್ಣ ಆಗಮಿಸುವ ಸಮಯದಲ್ಲಿ ಪುಟ್ಟಕ್ಕನ ಸೀರಿಯಲ್‌ ಕೊನೆಗೊಳ್ಳಬಹುದು ಎಂದು ಕಿರುತೆರೆ ವೀಕ್ಷಕರು ಅಂದಾಜಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಅಲ್ಲೋಲಕಲ್ಲೋಲವಾಗಿದೆ. ಟಿಆರ್‌ಪಿಯಲ್ಲಿ ಅಗ್ರಸ್ಥಾನದಲ್ಲಿದ್ದ ಪುಟ್ಟಕ್ಕನ ಮಕ್ಕಳು ಇದೀಗ ತನ್ನ...