Bengaluru, ಮಾರ್ಚ್ 28 -- Salman Khan Security: ಸಲ್ಮಾನ್‌ ಖಾನ್‌ ನಟನೆಯ ಬಹುನಿರೀಕ್ಷಿತ ಸಿಕಂದರ್‌ ಸಿನಿಮಾ ಮಾ. 30ರ ಈದ್‌ ಹಬ್ಬದ ಪ್ರಯುಕ್ತ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ತಮಿಳಿನ ಡೈರೆಕ್ಟರ್‌ ಎ.ಆರ್‌ ಮುರುಗದಾಸ್‌ ನಿರ್ದೇಶನದಲ್ಲಿನ ಈ ಚಿತ್ರದ ಹೈಪ್‌ ಈಗಾಗಲೇ ಮುಗಿಲು ಮುಟ್ಟಿದೆ. ಟ್ರೇಲರ್‌ ಮೂಲಕ ಸಿನಿಮಾ ಮೇಲಿನ ಕ್ರೇಜ್‌ ಜಾಸ್ತಿಯಾಗಿದ್ದು, ಈಗಾಗಲೇ ಮುಂಗಡ ಬುಕಿಂಗ್‌ನಲ್ಲೂ ಸಿಕಂದರ್‌ ಸಿನಿಮಾ ಕಮಾಲ್‌ ಮಾಡುತ್ತಿದೆ. ಹೀಗಿರುವಾಗಲೇ ಇದೇ ಚಿತ್ರ ಮೂಡಿಬಂದ ರೀತಿ, ಶೂಟಿಂಗ್‌ ಅನುಭವಗಳ ಬಗ್ಗೆ ನಟ ಸಲ್ಮಾನ್ ಖಾನ್‌ ಮಾತನಾಡಿದ್ದಾರೆ. ಆಮೀರ್‌ ಖಾನ್‌ ನಡೆಸಿದ ಸಂದರ್ಶನದಲ್ಲಿ ನಿರ್ದೇಶಕ ಮುರುಗದಾಸ್‌ ಸಹ ಭಾಗವಹಿಸಿದ್ದರು.

ಸಿಕಂದರ್‌ ಸಿನಿಮಾ ಬಿಡುಗಡೆಗೆ ಇನ್ನೇನು ಎರಡೇ ದಿನ ಬಾಕಿ ಇದೆ. ಈ ಸಿನಿಮಾದ ಪ್ರಚಾರ ಕೆಲಸದಲ್ಲಿಯೂ ಚಿತ್ರತಂಡ ತೊಡಗಿಸಿಕೊಂಡಿದೆ. ಈ ಪ್ರಮೋಷನ್‌ ನಿಮಿತ್ತ, ನಟ ಮತ್ತು ನಿರ್ದೇಶಕರನ್ನು ಸಂದರ್ಶಿಸಿದ್ದಾರೆ ಆಮೀರ್‌ ಖಾನ್.‌ ಸಿನಿಮಾ, ಕಲಾವಿದರು, ನಿರ್ದೇಶಕರ ಬಗ್ಗೆ ಮಾತ್ರವಲ್...