ಭಾರತ, ಜೂನ್ 14 -- ಅರ್ಥ: ಭರತ ವಂಶಜನಾದ ಅರ್ಜುನನೆ, ಒಬ್ಬನೇ ಸೂರ್ಯನು ಇಡೀ ವಿಶ್ವವನ್ನು ಹೇಗೆ ಬೆಳಗುತ್ತಾನೋ ಹಾಗೆಯೇ ದೇಹದೊಳಗಿರುವ ಜೀವಿಯು ಪ್ರಜ್ಞೆಯಿಂದ ಇಡೀ ದೇಹವನ್ನು ಬೆಳಗುತ್ತಾನೆ.

ಭಾವಾರ್ಥ: ಪ್ರಜ್ಞೆಯನ್ನು ಕುರಿತು ಹಲವಾರು ಊಹೆಗಳಿವೆ. ಭಗವದ್ಗೀತೆಯು ಇಲ್ಲಿ ಸೂರ್ಯ ಮತ್ತು ಸೂರ್ಯ ಪ್ರಕಾಶಗಳ ಉದಾಹರಣೆಯನ್ನು ಕೊಟ್ಟಿದೆ. ಸೂರ್ಯನು ಒಂದೇ ಸ್ಥಳದಲ್ಲಿರುತ್ತಾನೆ. ಆದರೂ ಇಡೀ ವಿಶ್ವಕ್ಕೆ ಬೆಳಕು ಕೊಡುತ್ತಾನೆ; ಹಾಗೆಯೇ ಜೀವಾತ್ಮನ ಒಂದು ಸಣ್ಣಕಣವು ಈ ದೇಹದ ಹೃದಯದಲ್ಲಿ ಇದ್ದರೂ ಪ್ರಜ್ಞೆಯ ಮೂಲಕ ಇಡೀ ದೇಹವನ್ನು ಬೆಳಗುತ್ತದೆ. ಸೂರ್ಯಪ್ರಕಾಶ ಅಥವಾ ಬೆಳಕು ಸೂರ್ಯನಿದ್ದಾನೆ ಎನ್ನುವುದಕ್ಕೆ ಪುರಾವೆಯಾದಂತೆ, ಪ್ರಜ್ಞೆಯು ಆತ್ಮನ ಇರುವಿಕೆಗೆ ಪುರಾವೆ. ದೇಹದಲ್ಲಿ ಆತ್ಮವಿದ್ದಾಗ ದೇಹದಲ್ಲಿ ಎಲ್ಲೆಲ್ಲಿಯೂ ಪ್ರಜ್ಞೆ ಇರುತ್ತದೆ; ಆತ್ಮವು ದೇಹವನ್ನು ಬಿಡುತ್ತಲೇ ಪ್ರಜ್ಞೆಯು ಇರುವುದಿಲ್ಲ. ಬುದ್ದಿವಂತನಾದ ಯಾವುದೇ ಮನುಷ್ಯನು ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಲ್ಲ. ಆದುದರಿಂದ ಪ್ರಜ್ಞೆಯು ಜಡವಸ್ತುವಿನ ಸಂಯೋಜನೆಯಿಂದ ಆದದ...