Bangalore, ಏಪ್ರಿಲ್ 29 -- ಗೌತಮ್‌ ಮನೆಗೆ ಬಂದ ಸದಾಶಿವ ಮತ್ತು ಮಂದಾಕಿನಿ ಅಲ್ಲಿಂದ ಹೊರಹೋಗಿ ಸಾಯುವ ಯೋಚನೆ ಮಾಡಿದ್ದರು. ಅಲ್ಲಿಗೆ ಗೌತಮ್‌ ಆಗಮಿಸಿ ಏನು ವಿಷಯ ಎಂದು ಕೇಳಿದ್ದನು. ಗೌತಮ್‌ನ ಒತ್ತಾಯಕ್ಕೆ ಸದಾಶಿವ ತನ್ನ ಮಗನ ವರ್ತನೆಯ ಕುರಿತು ತಿಳಿಸಿದ್ದನು.

ತಮ್ಮ ಮಗ ಜೀವನ್‌ನ ಕುಡಿತದ ಚಟ, ಭೂಪತಿ ಸಹವಾಸ, ಎಲ್ಲದರ ಪರಿಣಾಮವಾಗಿ ನಮ್ಮನ್ನು ಮನೆಗೆ ಹೊರಹಾಕಿದ್ದಾನೆ ಎಂದು ಸದಾಶಿವ ಹೇಳಿದ್ದಾರೆ. "

"ನೀವು ಮೇಷ್ಟ್ರು, ಇನ್ನೊಬ್ಬರಿಗೆ ಪಾಠ ಹೇಳೋರು, ಇಂತಹ ನಿರ್ಧಾರ ಯಾಕೆ ತೆಗೆದುಕೊಂಡಿದ್ದೀರಿ?" ಎಂದು ಗೌತಮ್‌ ಪ್ರಶ್ನಿಸುತ್ತಾರೆ."ನಾವು ಏನೇ ಆಗಿದ್ರು ಸಮಯದ ಮುಂದೆ ತುಂಬಾ ಸಣ್ಣವರು" ಎಂದು ಸದಾಶಿವ ಹೇಳುತ್ತಾರೆ. "ಏನೆಂದು ಹೇಳಿ ಮಾವ" ಎಂದು ಗೌತಮ್‌ ಕೇಳುತ್ತಾರೆ.

ಆಗ ಮಂದಾಕಿನಿ ಮಗ ಮನೆಯಿಂದ ಹೊರಗೆ ಹಾಕಿದ ಸಂಗತಿ ಹೇಳುತ್ತಾರೆ. "ಇದು ನನ್ನ ಮನೆ, ನಾನು ಕಟ್ಟಿಸಿದ ಮನೆ, ಇಷ್ಟೆಲ್ಲ ಆದ ಮೇಲೆ ಈ ಮನೆಯಲ್ಲಿ ಇರಬಾರದು" ಎಂದು ಜೀವನ್‌ ಹೇಳಿದ್ದ ವಿಷಯ ಕೇಳಿ ಗೌತಮ್‌ಗೆ ದುಃಖವಾಗುತ್ತದೆ.

ಎಲ್ಲದಕ್ಕೂ ನಾನು ಪರಿಹಾರ ಹ...