Bengaluru, ಫೆಬ್ರವರಿ 1 -- ವೈದಿಕ ಜ್ಯೋತಿಷ್ಯ ಶಾಸ್ತ್ರವು ಗ್ರಹ, ನಕ್ಷತ್ರ, ರಾಶಿಗಳನ್ನು ಒಳಗೊಂಡಿದೆ. ಇವೆಲ್ಲವೂ ವ್ಯಕ್ತಿಯ ಜಾತಕದ ಮೇಲೆ ಪರಿಣಾಮ ಬೀರುತ್ತದೆ. ಜಾತಕದಲ್ಲಿ ಗ್ರಹ, ನಕ್ಷತ್ರ, ರಾಶಿಗಳ ಸ್ಥಾನದ ಮೇರೆಗೆ ಆ ವ್ಯಕ್ತಿಯ ಭವಿಷ್ಯವನ್ನು ಹೇಳಲಾಗುತ್ತದೆ. ಪ್ರತಿಯೊಬ್ಬರ ಜಾತಕವು ಗ್ರಹಗಳ ಸ್ಥಾನವನ್ನು ಅವಲಂಬಿಸಿರುತ್ತದೆ. ಯಾವ ಗ್ರಹ ಯಾವ ಮನೆಯಲ್ಲಿದೆ ಎಂಬುದು ಬಹಳ ಮುಖ್ಯವಾಗಿರುತ್ತದೆ. ವಿವಿಧ ಮನೆಗಳಲ್ಲಿ ಅವುಗಳ ಇರುವಿಕೆಯು ವ್ಯಕ್ತಿಯ ಜೀವನದ ಹಲವಾರು ಅಂಶಗಳನ್ನು ಬಹಿರಂಗಪಡಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಮತ್ತು ಕೇತುವನ್ನು ನೆರಳು ಗ್ರಹಗಳು ಎಂದು ಕರೆಯಲಾಗುತ್ತದೆ. ಕೇತು ಗ್ರಹವು 1 ರಿಂದ 9 ಮನೆಗಳಲ್ಲಿ ಯಾವ ಮನೆಯಲ್ಲಿ ನೆಲೆಸಿದೆ ಅನ್ನುವುದರ ಮೂಲಕ‌ ಅದು ಶುಭ ಮತ್ತು ಅಶುಭ ಫಲಗಳನ್ನು ಉಂಟುಮಾಡುತ್ತದೆ.

ಜಾತಕದಲ್ಲಿ ಕೇತುವು 1ನೇ ಮನೆಯಲ್ಲಿದ್ದಾಗ ಅದು ಆಧ್ಯಾತ್ಮಿಕ ವ್ಯಕ್ತಿತ್ವವನ್ನು ರೂಪಿಸುತ್ತದೆ. ಈ ವ್ಯಕ್ತಿಗಳು ಆತ್ಮಾವಲೋಕನವನ್ನು ಮಾಡಿಕೊಳ್ಳುವವರಾಗಿರುತ್ತಾರೆ. ಇವರು ಆಗಾಗ ನಿಗೂಢ ...