ಭಾರತ, ಫೆಬ್ರವರಿ 22 -- ವಾರ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಫೆಬ್ರುವರಿ 23 ರ ಭಾನುವಾರದಿಂದ ಮಾರ್ಚ್ 1ರ ಶನಿವಾರದವರೆಗಿನ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.

ನಿಮ್ಮಲ್ಲಿ ನಯ ವಿಧೇಯತೆಯ ಗುಣವಿರುತ್ತದೆ. ಕುಟುಂಬದಲ್ಲಿ ಪ್ರೀತಿ ವಿಶ್ವಾಸ ಉಳಿಯಲು ಕಾರಣರಾಗುವಿರಿ. ಮಕ್ಕಳ ಮನಸ್ಸಿನಲ್ಲಿ ಬೇಸರವಿರುತ್ತದೆ. ಸ್ವಪ್ರಯತ್ನದಿಂದ ಜೀವನದಲ್ಲಿ ಮುಂದೆ ಬರುವಿರಿ. ಸಂಘ ಸಂಸ್ಥೆಗಳ ಒಡೆತನ ನಿಮಗೆ ಲಭಿಸುತ್ತದೆ. ಜೀವನದಲ್ಲಿ ಏರಿಳಿತಗಳು ಇರುತ್ತವೆ. ತಪ್ಪು ಕಲ್ಪನೆಗಳಿಂದ ವಿವಾದಗಳಿಗೆ ಸಿಲುಕುವಿರಿ. ನಿಮ್ಮಿಂದ ಸಹಾಯ ಪಡೆದವರೇ ನಿಮ್ಮ ಪ್ರಗತಿಗೆ ಅಡ್ಡಗಾಲಾಗುತ್ತಾರೆ. ದೂರದ ಸಂಬಂಧಿಯೊಬ್ಬರ ಸಹಾಯ ನಿಮ...