ಭಾರತ, ಏಪ್ರಿಲ್ 9 -- ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬ ಮಾತಿನಂತೆ ನಿಮ್ಮ ಬೆಳಗ್ಗಿನ ದಿನಚರಿಯಲ್ಲಿ ಶುಂಠಿ ಮತ್ತು ಅರಿಶಿನ ಪಾನೀಯ ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಈ ಪಾನೀಯವನ್ನು ತಯಾರಿಸಲು ವಿವಿಧ ವಿಧಾನಗಳಿದ್ದು, ಅದು ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಶುಂಠಿ ಮತ್ತು ಅರಿಶಿನ ಪಾನೀಯ ಕುಡಿಯುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಉತ್ತಮ ಜಿರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ನೈಸರ್ಗಿಕ ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಅಲ್ಲದೆ ಚರ್ಮದ ಕಾಂತಿಯನ್ನು ಉತ್ತೇಜಿಸುವವರೆಗೆ ವ್ಯಾಪಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಈ ಪಾನೀಯಕ್ಕೆ ತೆಂಗಿನ ನೀರು, ಕಾಳುಮೆಣಸು, ಕಿತ್ತಳೆ ರಸ, ಜೇನುತುಪ್ಪ ಸೇರಿದಂತೆ ಇತರೆ ಪದಾರ್ಥಗಳನ್ನು ಸೇರಿಸಬಹುದು. ಅತಿಯಾದರೆ ಅಮೃತವು ವಿಷವೆಂಬತೆ ಹೆಚ್ಚಾಗಿ ಈ ಪಾನೀಯವನ್ನು ಸೇವಿಸುವುದು ಒಳ್ಳೆಯದಲ್ಲ. ಮಿತವಾಗಿ ಸೇವಿಸಬೇಕು. ಇದನ್ನು ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗ...