Bengaluru, ಮಾರ್ಚ್ 20 -- ಚರ್ಮದ ಕಾಂತಿಗೆ ಫೇಸ್ ಪ್ಯಾಕ್ ಮತ್ತು ಸ್ಕ್ರಬ್‌ಗಳನ್ನು ಹಚ್ಚಿಕೊಳ್ಳುವುದರಿಂದ ಪ್ರಯೋಜನ ಪಡೆಯಬಹುದಾಗಿದ್ದರೂ, ನಾವು ಸೇವಿಸುವ ಆಹಾರ ಕೂಡ ಸೌಂದರ್ಯ ದಿನಚರಿಯ ಅವಿಭಾಜ್ಯ ಅಂಗವಾಗಿದೆ. ಬೇಸಿಗೆಯಲ್ಲಿ ಮುಖ ಕಾಂತಿ ಕಳೆದುಕೊಳ್ಳುತ್ತದೆ ಎಂಬುದು ಹಲವರ ಚಿಂತೆ. ಚರ್ಮ ಹೊಳೆಯುಂತಾಗಲು ನಾವು ದಿನನಿತ್ಯ ಉಪಯೋಗಿಸುವ ಪದಾರ್ಥಗಳಿವೆ. ಹೊಳೆಯುವ ಚರ್ಮಕ್ಕಾಗಿ ಅಂತಹ ಮನೆಮದ್ದುಗಲ್ಲಿ ಜೀರಿಗೆ ಪಾನೀಯ ಅಥವಾ ಜೀರಿಗೆ ಬೀಜದ ನೀರು ಕೂಡ ಒಂದು.

ಈ ಜೀರಿಗೆ ಪಾನೀಯವನ್ನು ತಲೆಮಾರುಗಳಿಂದ ಬಳಸಲಾಗುತ್ತಿದೆ. ಚರ್ಮದ ಕಾಳಜಿಗೆ ಜೀರಿಗೆ ನೀರಿನ ಪ್ರಯೋಜನಗಳು ಹಲವು. ಮೊಡವೆಗಳನ್ನು ಎದುರಿಸುವುದರಿಂದ ಹಿಡಿದು ತೇವಾಂಶಯುಕ್ತವಾಗುವವರೆಗೆ ಜೀರಿಗೆ ನೀರು ತ್ವಚೆಯ ಸೌಂದರ್ಯಕ್ಕೆ ಕೊಡುಗೆ ನೀಡುತ್ತದೆ. ಚರ್ಮಕ್ಕೆ ಜೀರಿಗೆ ಪಾನೀಯ ಕುಡಿಯುವುದರ 4 ಪ್ರಯೋಜನಗಳ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ.

ಮೊಡವೆಗಳನ್ನು ದೂರವಿಡುತ್ತದೆ: ಜೀರಿಗೆ ಬೀಜಗಳಲ್ಲಿ ಕಂಡುಬರುವ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದಾಗಿ ಮೊಡವೆಗಳನ್ನು ಕಡಿಮೆ ಮಾ...