Tumkur, ಏಪ್ರಿಲ್ 29 -- ಬೆಂಗಳೂರು: ರಾಜ್ಯದ ಪ್ರಖ್ಯಾತ ಆರೋಗ್ಯವರ್ಧಕ ಪೌಡರ್‌ ಜೀನಿ ಕಂಪನಿ ಮಾಲೀಕ ದಿಲೀಪ್ ಕುಮಾರ್ ಮೇಲೆ ಅತ್ಯಾಚಾರ ಪ್ರಯತ್ನ, ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶಿರಾ ತಾಲೂಕಿನ ಯುವತಿ ತುಮಕೂರಿನ ಕಳ್ಳಂಬೆಳ್ಳ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಕಂಪನಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಆದರೆ ಕಂಪನಿ ಮಾಲೀಕ ದಿಲೀಪ್‌ ಕುಮಾರ್‌ ನಾಪತ್ತೆಯಾಗಿದ್ದಾರೆ.ಲೈಂಗಿಕ ದೌರ್ಜನ್ಯ ಮತ್ತುಜಾತಿ ನಿಂದನೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಿಲೀಪ್‌ ಕುಮಾರ್ ಅವರೂ ಸಹ ಶಿರಾ ತಾಲೂಕಿನ ಯರಗುಂಟೆ ಗ್ರಾಮದ ನಿವಾಸಿಯಾಗಿದ್ದಾರೆ. ಜತೆಗೆ ದಿಲೀಪ್‌ ಕುಮಾರ್ ಜಾತಿ ನಿಂದನೆ ಮಾಡಿದ್ದಾರೆಂದೂ ಸಹ ಆರೋಪಿಸಲಾಗಿದೆ. ಪ್ರಕರಣ ದಾಖಲಾದ ನಂತರ ಇವರು ವಿಡಿಯೋ ಮಾಡಿ ತಲೆಮರೆಸಿಕೊಂಡಿದ್ದಾರೆ. ವಿಡಿಯೋದಲ್ಲಿ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.

ಆರೋಪ ಮಾಡಿರುವ ಯುವತಿ ಕಳೆದ 10 ತಿಂಗಳಿನಿಂದ ಜೀನ...