Bengaluru, ಮೇ 8 -- ಬೆಂಗಳೂರು: ಗೋಬಿ ಮಂಚೂರಿ, ಕಾಟನ್‌ ಕ್ಯಾಂಡಿ, ಪಾನಿಪೂರಿ, ಕೆಬಾಬ್‌, ಶವರ್ಮಾ ಮತ್ತು ಚಹಾದಲ್ಲಿ ಕೃತಕ ಬಣ್ಣಗಳನ್ನು ಬೆರೆಸುವುದನ್ನು ನಿಷೇಧಿಸಿದ ನಂತರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಕಣ್ಣು ಇದೀಗ ಜಿಲೇಬಿ ಮತ್ತು ಶರಬತ್‌ ಮೇಲೆ ಬಿದ್ದಿದೆ. ಜಿಲೇಬಿ ಮತ್ತು ಶರಬತ್‌ ಗುಣಮಟ್ವನ್ನು ಪರೀಕ್ಷಿಸಲು FSSAI ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲೇಬಿ ಮತ್ತು ಶರಬತ್‌ನ ಮಾದರಿಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ. ರಾಜ್ಯಾದ್ಯಂತ ಕನಿಷ್ಠ 250 ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ಆಕರ್ಷಕವಾಗಿ ಕಾಣುವಂತೆ ಮಾಡಲು ಜಿಲೇಬಿ ತಯಾರಿಸುವಾಗ ಕೃತಕ ಬಣ್ಣಗಳನ್ನು ಬಳಸಲಾಗುತ್ತಿರುವುದು ಕಂಡು ಬಂದಿದೆ. ಈ ನಿಟ್ಟಿನಲ್ಲಿ ಪರೀಕ್ಷೆಗೊಳಪಡಿಸುವುದು ಮುಖ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶರಬತ್‌ಗೆ ಬೇಸಿಗೆಯಲ್ಲಿ ಎಲ್ಲಿಲ್ಲದ ಬೇಡಿಕೆ. ಶರಬತ್‌ನಲ್ಲಿ ಸಂರಕ್ಷಕ ಪದಾರ್ಥಗಳನ್ನು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ದೀರ್ಘಾವಧಿಗೆ ಬಾಳಿ...