ಭಾರತ, ಏಪ್ರಿಲ್ 2 -- Jiohotstar Ramnavami Live: ರಾಮನವಮಿಯಂದು ಬಾಲಿವುಡ್‌ನ ಖ್ಯಾತ ನಟ ಅಮಿತಾಬ್ ಬಚ್ಚನ್ ರಾಮನ ಕಥೆಗಳನ್ನು ನಿರೂಪಣೆ ಮಾಡುವ ಮೂಲಕ ಪ್ರೇಕ್ಷಕರಿಗೆ ಭಕ್ತಿಪೂರ್ವಕ ಅನುಭವವನ್ನು ನೀಡಲು ಸಜ್ಜಾಗಿದ್ದಾರೆ.

ಏಪ್ರಿಲ್ 6 ರಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಆಯೋಧ್ಯೆ ರಾಮಮಂದಿರದಲ್ಲಿ ರಾಮನವಮಿ ಪ್ರಯಕ್ತ ನಡೆಯಲಿರುವ ವಿಶೇಷ ಕಾರ್ಯಕ್ರಮಗಳ ನೇರ ಪ್ರಸಾರ ಜಿಯೊಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದ್ದು, ಈ ಸಮಯದಲ್ಲಿ ಅಮಿತಾಬ್ ರಾಮನ ಕಥೆಗಳನ್ನು ನಿರೂಪಣೆ ಮಾಡಲಿದ್ದಾರೆ.

ಈ ಕಾರ್ಯಕ್ರಮದ ಮೇಲೆ ಬಿಗ್ ಬಿ ಮಕ್ಕಳೊಂದಿಗೆ ಸಂವಾದದ ಸೆಷನ್‌ ಅನ್ನು ಕೂಡ ನಡೆಸಿ ಕೊಡಲಿದ್ದಾರೆ. ಇವರು ರಾಮಾಯಣದ ಆಯ್ದ ಕಥೆಗಳನ್ನು ಆಕರ್ಷಕವಾಗಿ ಮತ್ತು ಸಾಪೇಕ್ಷ ರೀತಿಯಲ್ಲಿ ಪ್ರದರ್ಶಿಸುತ್ತಾರೆ. ಅಯೋಧ್ಯೆಯಲ್ಲಿ ನಡೆಯುವ ವಿಶೇಷ ಪೂಜೆಗಳಿಂದ ಹಿಡಿದು ಭದ್ರಾಚಲಂ, ಪಂಚವಟಿ, ಚಿತ್ರಕೂಟ ಮತ್ತು ಅಯೋಧ್ಯೆ ಈ ಜಾಗಗಳಲ್ಲಿ ನಡೆಯುವ ಆರತಿಯ ಲೈವ್‌, ಭಕ್ತಿ ಭಜನೆಗಳು ಮತ್ತು ಕೈಲಾಶ್ ಖೇರ್ ಮತ್ತು ಮಾಲಿನಿ ಅವಸ್ಥಿ ಸೇರಿದ...