ಭಾರತ, ಫೆಬ್ರವರಿ 2 -- ಬೆಂಗಳೂರು: ಮಾರುಕಟ್ಟೆಯಲ್ಲಿ ಪ್ರತಿ ಸ್ಪರ್ಧೆಗಳಿಗೆ ತೀವ್ರ ಪೈಪೋಟಿ ನೀಡುತ್ತಿರುವ ರಿಲಯನ್ಸ್ ಜಿಯೋ ಹೊಸ ಹೊಸ ಪ್ಲಾನ್‌ಗಳನ್ನು ಘೋಷಿಸಿದ್ದು, ಇದೀಗ ಏರ್‌ಫೈಬರ್ ಮತ್ತು ಏರ್‌ಫೈಬರ್ ಮ್ಯಾಕ್ಸ್ ಗ್ರಾಹಕರಿಗಾಗಿ 101 ರೂಪಾಯಿ ಹಾಗೂ 255 ರೂಪಾಯಿಗಳ ಎರಡು ಹೊಸ ಬೂಸ್ಟರ್ ಪ್ಲಾನ್‌ಗಳನ್ನು ಪರಿಚಯಿಸಿದೆ.

101 ರೂಪಾಯಿ ಬೂಸ್ಟರ್ ಪ್ಲಾನ್‌ನಲ್ಲಿ ಜಿಯೋ ಏರ್‌ಫೈಬರ್ ಗ್ರಾಹಕರು 100 ಜಿಬಿ ಹೈ ಸ್ಪೀಡ್ ಡೇಟಾವನ್ನು ನೀಡುತ್ತಿದೆ. 251 ರೂಪಾಯಿ ಬೂಸ್ಟರ್ ಪ್ಲಾನ್‌ನಲ್ಲಿ 500 ಜಿಬಿ ಡೇಟಾ ಇರಲಿದೆ. ಇದನ್ನು ಏರ್‌ಫೈಬರ್ ಪ್ಲಸ್ ಗ್ರಾಹಕರು ಸೇರಿದಂತೆ ಎಲ್ಲರೂ ಪಡೆಯಬಹುದಾಗಿದೆ. ಈ ಎರಡೂ ಪ್ಲಾನ್‌ಗಳು Myjio ಅಪ್ಲಿಕೇಶನ್ ಮತ್ತು jio.com ನಲ್ಲಿ ಲಭ್ಯವಿದೆ. ಜಿಯೋ ಏರ್‌ಫೈಬರ್ ಬಳಕೆದಾರರಿಗೆ 400 ರೂಪಾಯಿಯ ಬೂಸ್ಟರ್ ಯೋಜನೆಯನ್ನು ಸಹ ನೀಡುತ್ತದೆ. ಈ ಪ್ಲಾನ್‌ನಲ್ಲಿ 1ಟಿಬಿ ಡೇಟಾ ಅವಧಿ ಮುಗಿದ ನಂತರ ಅನಿಯಮಿತ ಯೋಜನೆಯಾಗುತ್ತದೆ. ಆದರೆ ಇದರ ವೇಗ 64kbps ಇರುತ್ತದೆ.

ಇದನ್ನೂ ಓದಿ: Airtel vs Jio vs Vi: 1...