ಭಾರತ, ಮಾರ್ಚ್ 29 -- ಬೆಂಗಳೂರು: ರಿಲಯನ್ಸ್ ಜಿಯೋ (Reliance Jio) ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ (Prepaid Customers) ಹೊಸ ರಿಚಾರ್ಜ್ ಪ್ಲಾನ್‌ಗಳನ್ನು (Recharge Plans) ಪರಿಚಯಿಸಿದೆ. ಎರಡು ಹೊಸ ಜಿಯೋ ಯೋಜನೆಗಳಲ್ಲಿ ಒಂದು 1099 ರೂಪಾಯಿ ಮತ್ತೊಂದು 1,499 ರೂಪಾಯಿ ಇದೆ. ಇವುಗಳೊಂದಿಗೆ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಉಚಿತವಾಗಿ ಸಿಗಲಿದೆ. ಆಯ್ದ ಜಿಯೋ ಫೋಸ್ಟ್‌ಪೇಯ್ಡ್ ಮತ್ತು ಜಿಯೋ ಫೈಬರ್ ಪ್ಲಾನ್‌ಗಳಲ್ಲಿ ನೆಟ್‌ಫ್ಲಿಕ್ಸ್ ಚಂದಾದರಿಕೆ ಈಗಾಗಲೇ ಲಭ್ಯವಿದೆ. ಆದರೆ ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಲಭ್ಯವಾಗುತ್ತಿರುವುದು ಇದೇ ಮೊದಲು. ಈ ಎರಡು ಹೊಸ ರಿಚಾರ್ಜ್ ಪ್ರಿಪೇಯ್ಡ್ ಪ್ಲಾನ್‌ಗಳೊಂದಿಗೆ ತನ್ನ ಜಿಯೋ ಕಂಪನಿಯ 40 ಕೋಟಿ ಪ್ರಿಪೇಯ್ಡ್ ಗ್ರಾಹಕರು ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ಪಡೆಯುವ ಆಯ್ಕೆಯನ್ನು ಹೊಂದಿದ್ದಾರೆ. ನೆಟ್‌ಫ್ಲಿಕ್ಸ್ ಚಂದಾದಾರಿಕೆಯೊಂದಿಗೆ ಜಿಯೊ ಪ್ರಿಪೇಯ್ಡ್ ಯೋಜನೆಯ ವಿವರಗಳು ಇಲ್ಲಿವೆ

1,099 ರೂಪಾಯಿಗಳ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಉಚಿತ ನ...