ಭಾರತ, ಮೇ 27 -- ಜಿತೇಶ್ ಶರ್ಮಾ (85*) ಮತ್ತು ವಿರಾಟ್ ಕೊಹ್ಲಿ (54*) ಅವರ ಸ್ಫೋಟಕ ಆಟದ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐತಿಹಾಸಿಕ ಗೆಲುವಿನೊಂದಿಗೆ 18ನೇ ಆವೃತ್ತಿಯ ಐಪಿಎಲ್​ನಲ್ಲಿ ಮೊದಲ ಕ್ವಾಲಿಫೈಯರ್​ಗೆ ಅರ್ಹತೆ ಪಡೆದುಕೊಂಡಿದೆ. ರಿಷಭ್ ಪಂತ್ ಪಡೆಯ ವಿರುದ್ಧ 228 ರನ್​​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ 6 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದೊಂದಿಗೆ ಲೀಗ್ ಮುಗಿಸಿತು. ಇದೀಗ ಮೇ 29ರಂದು ನಡೆಯುವ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಟೇಬಲ್ ಟಾಪರ್ ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯಲಿದೆ. 2016ರ ನಂತರ ಇದೇ ಮೊದಲ ಆರ್​ಸಿಬಿ ಅಗ್ರ-2ರೊಳಗೆ ಅವಕಾಶ ಪಡೆದಿದೆ.

Published by HT Digital Content Services with permission from HT Kannada....