Bengaluru, ಏಪ್ರಿಲ್ 16 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮಂಗಳವಾರ ಏಪ್ರಿಲ್ 15ರ ಸಂಚಿಕೆಯಲ್ಲಿ ಜಯಂತ ಜಾಹ್ನವಿ ತವರು ಮನೆಯಲ್ಲಿ ತಂಗಿದ್ದಾನೆ. ಬೆಳಗ್ಗೆ ವಾಪಸ್ ಹೋಗಲು ತಯಾರಿ ನಡೆಸುತ್ತಿದ್ದಾನೆ, ಅಷ್ಟರಲ್ಲಿ ಅಜ್ಜಿಯ ಬಳಿ ಹೋಗಿ ಮತ್ತೆ ಜಾಹ್ನವಿ ಬಗ್ಗೆ ವಿಚಾರಿಸಿದ್ದಾನೆ. ಆದರೆ ಅಜ್ಜಿಯಿಂದ ಅವನಿಗೆ ಯಾವುದೇ ಸುಳಿವು ಸಿಕ್ಕಿಲ್ಲ, ಹೀಗಾಗಿ ಇನ್ನೇನು ಹೊರಡಬೇಕು ಎಂದು ಎದ್ದಾಗ ಅವನಿಗೆ ಕಾಲ ಬಳಿ ಏನೋ ಕಾಣಿಸಿದೆ. ನೋಡಿದರೆ ಅದು ಜಾಹ್ನವಿಯ ಕಾಲ್ಗೆಜ್ಜೆ! ಅದನ್ನು ಎತ್ತಿಕೊಂಡು ಅವನು ಪರಿಶೀಲಿಸುತ್ತಾನೆ. ಆಗ ಅದು ಅವನೇ ಅವಳಿಗೆ ಕೊಡಿಸಿದ ಕಾಲ್ಗೆಜ್ಜೆ ಎಂದು ಅರಿವಾಗುತ್ತದೆ. ಅವನು ಮತ್ತೆ ಗೆಜ್ಜೆಯನ್ನು ಎತ್ತಿಕೊಂಡು ನೋಡುತ್ತಾನೆ. ಅಂದರೆ ಜಾಹ್ನವಿ ಇನ್ನೂ ಜೀವಂತವಾಗಿದ್ದಾಳೆ ಎನ್ನುವುದು ಅವನಿಗೆ ತಿಳಿಯುತ್ತದೆ.

ನಂತರ ಜಯಂತ ಶಾರದಮ್ಮನನ್ನು ಕರೆದುಕೊಂಡು ವಾಪಸ್ ಮನೆಗೆ ಮರಳುತ್ತಾನೆ. ಮನೆಗೆ ತಲುಪಿದ ಬಳಿಕವೂ ಅವನಿಗೆ ಜಾನುವಿನದೇ ಯೋಚನೆಯಾಗುತ್ತದೆ. ಹೀಗಾಗಿ ಅವನು ಮತ್ತೆ ಶ್ರೀಲಂಕಾಗೆ ಹ...