Bengaluru, ಏಪ್ರಿಲ್ 4 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಗುರುವಾರ ಏಪ್ರಿಲ್ 3ರ ಸಂಚಿಕೆಯಲ್ಲಿ ಜವರೇಗೌಡ ಮತ್ತು ಮರಿಗೌಡ ಇಬ್ಬರೂ ಕುಳಿತುಕೊಂಡು ಖುಷಿಯಾಗಿ ತಮ್ಮ ಪ್ಲ್ಯಾನ್ ಸಕ್ಸಸ್ ಆಯ್ತು ಎಂದು ಖುಷಿಪಡುತ್ತಿದ್ದಾರೆ. ಅವರು ಅಂದುಕೊಂಡಂತೆ ಎಲ್ಲವೂ ನಡೆಯುತ್ತಿದೆ ಎಂದು ಮಾತನಾಡುತ್ತಿದ್ದಾರೆ. ಆದರೆ ಇತ್ತ ಚೆಲ್ವಿ ಮಾತ್ರ ಚಿಂತೆಯಿಂದ ಕುಳಿತಿದ್ದಾಳೆ. ವೆಂಕಿ ಫೋನ್ ಕೂಡ ರಿಸೀವ್ ಮಾಡುತ್ತಿಲ್ಲ, ಮನೆಗೂ ಬಂದಿಲ್ಲ, ದೇವಸ್ಥಾನದಲ್ಲೂ ಇಲ್ಲ ಎಂದು ಆತಂಕಪಟ್ಟಿದ್ದಾಳೆ. ಫೋನ್ ಮಾಡಿದರೆ, ಸ್ವಿಚ್ ಆಫ್ ಬರುತ್ತಿದೆ ಎಂದು ಚಿಂತೆಯಲ್ಲಿ ಇದ್ದಾಳೆ. ಅವಳು ಕೊನೆಗೆ ಆತಂಕದಿಂದ ವೀಣಾಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾಳೆ. ವೀಣಾ ಜೊತೆ ಮಾತನಾಡಿ, ವೆಂಕಿ ಕಾಣಿಸುತ್ತಿಲ್ಲ, ಮನೆಗೂ ಬಂದಿಲ್ಲ ಎಂದು ಹೇಳಿದ್ದಾಳೆ.

ವೆಂಕಿ ಮಾತ್ರ ಯಾವುದೇ ಸುಳಿವು ನೀಡದೇ ನಾಪತ್ತೆಯಾಗಿ, ಪೊಲೀಸರ ಬಳಿ ಇದ್ದಾನೆ, ಮಾತು ಕೊಟ್ಟಂತೆ ಅವನು ಪೊಲೀಸರ ಬಳಿ ಸರೆಂಡರ್ ಆಗಿದ್ದಾನೆ. ಉಳಿದ ವಿಚಾರ ಎಲ್ಲವೂ ಜವರೇಗೌಡ್ರ ಸೂಚನೆಯಂತೆ ನಡ...