Bengaluru, ಏಪ್ರಿಲ್ 29 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಏಪ್ರಿಲ್ 28ರ ಸಂಚಿಕೆಯಲ್ಲಿ ಶಾರದಮ್ಮನ ಗಂಡ ರಾಮಸ್ವಾಮಿ, ಮಗಳ ಮದುವೆಗೆ ಹಣಕಾಸಿನ ಸಹಾಯ ಕೇಳಿಕೊಂಡು ಬಂದಿದ್ದಾರೆ. ಜಯಂತ್ ಅವರಿಗೆ ಹಣ ಕೊಡುವುದಾಗಿ ಒಪ್ಪಿಕೊಂಡಿದ್ದಾನೆ. ಆದರೆ ಜಯಂತ್ ಬಳಿ ತಪ್ಪಿಯೂ ಜಾಹ್ನವಿ ವಿಚಾರ ಮಾತನಾಡಬಾರದು ಎಂದು ಶಾರದಮ್ಮ ಗಂಡನಿಗೆ ಹೇಳಿ ಕಳುಹಿಸಿದ್ದಾರೆ. ಆದರೆ ಮಾತಿನ ಭರದಲ್ಲಿ ಶಾರದಮ್ಮ ಹೇಳಿರುವ ಕಿವಿಮಾತು ರಾಮಸ್ವಾಮಿಗೆ ಮರೆತುಹೋಗಿದೆ. ಜಯಂತ್‌ನ ಗುಣವನ್ನು ಹೊಗಳುವ ಭರದಲ್ಲಿ ಅವರು, ಇಂತಹ ಸಣ್ಣ ವಯಸ್ಸಿಗೆ ಇಂತಹ ಕಷ್ಟ ಬರಬಾರದಿತ್ತು, ನಿಮಗೆ ದೇವರು ತುಂಬಾ ಕಷ್ಟ ಕೊಟ್ಟಿದ್ದಾನೆ. ಅಲ್ಲದೆ, ಪಾಪ ಜಾಹ್ನವಿ, ನಿಮ್ಮನ್ನು ತುಂಬಾ ಪ್ರೀತಿಸುತ್ತಿದ್ದಳು, ಆದರೆ ಈ ಲೋಕವನ್ನೇ ಬಿಟ್ಟು ಹೋದಳು ಎಂದು ಹೇಳಿದ್ದಾರೆ. ಅಷ್ಟೇ.. ಅದನ್ನು ಕೇಳುತ್ತಲೇ ಜಯಂತ್ ಕೈಯಲ್ಲಿದ್ದ ಪಿಸ್ತೂಲ್‌ನಿಂದ ಗುಂಡು ಹಾರಿದೆ.

ಇನ್ನೊಂದೆಡೆ ಭಾವನಾ, ಸಿದ್ದೇಗೌಡ್ರ ಗೆಳೆಯರನ್ನು ಕರೆಸಿಕೊಂಡಿದ್ದಾಳೆ. ಅವರ ಬಳಿ, ನೀವು ಯಾರ...