Bengaluru, ಮಾರ್ಚ್ 6 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಬುಧವಾರ ಮಾರ್ಚ್ 5ರ ಸಂಚಿಕೆಯಲ್ಲಿ ಸಿದ್ದೇಗೌಡ್ರು ಪೊಲೀಸ್ ಠಾಣೆಗೆ ತೆರಳಿದ್ದಾರೆ. ಪೊಲೀಸರ ಜತೆ ಮಾತನಾಡುತ್ತಾ, ಆಕ್ಸಿಡೆಂಟ್ ಕೇಸ್‌ನ ಕುರಿತು ವಿಚಾರಿಸಿದ್ದಾರೆ. ಅಲ್ಲದೆ, ಈ ಅಕ್ಸಿಡೆಂಟ್ ಮಾಡಿದ್ದು ನಾನೇ ಎಂದು ಪೊಲೀಸರಲ್ಲಿ ಸಿದ್ದೇಗೌಡ್ರು ಹೇಳುತ್ತಾರೆ. ಆದರೆ ಪೊಲೀಸರು ಅವರ ಮಾತು ಕೇಳಲು ತಯಾರಿರುವುದಿಲ್ಲ. ಜತೆಗೆ ನೀವು ಸುಮ್ಮನೆ ಇರಿ, ನಮ್ಮ ಜತೆ ಬನ್ನಿ ಎಂದು ಹೊರಗಡೆ ಕರೆದೊಯ್ಯುತ್ತಾರೆ. ಅಲ್ಲದೇ, ಸಿದ್ದೇಗೌಡ್ರು, ಮನೆಗೆ ಫೋನ್ ಮಾಡಿ, ಭಾವನಾರನ್ನು ಬರಲು ಹೇಳಿದ್ದಾರೆ. ಅಕ್ಸಿಡೆಂಟ್ ಕುರಿತು ಹೇಳಲಿಕ್ಕಿದೆ, ಪೊಲೀಸ್ ಠಾಣೆಗೆ ಬನ್ನಿ ಎಂದು ಕರೆದಿದ್ದಾನೆ. ಅದರಂತೆ ಭಾವನಾ ಪೊಲೀಸ್ ಠಾಣೆಗೆ ಹೊರಟಿದ್ದಾಳೆ.

ಸಿದ್ದೇಗೌಡ ಪೊಲೀಸ್ ಠಾಣೆಗೆ ಹೋಗಿರುವ ವಿಚಾರ ತಿಳಿದು, ಮರಿಗೌಡ ಕೂಡಲೇ ಅವನಿಗೆ ಫೋನ್ ಮಾಡುತ್ತಾನೆ, ನೀನು ಕೂಡಲೇ ಮನೆಗೆ ಬಾ, ಈ ಸಮಸ್ಯೆಯನ್ನು ನಾವೇ ಪರಿಹರಿಸುವ, ನೀನು ಅಲ್ಲಿರುವುದು ಸರಿಯಲ್ಲ ಎನ್ನುತ್ತಾನೆ, ಆದರ...