Bengaluru, ಏಪ್ರಿಲ್ 26 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಏಪ್ರಿಲ್ 25ರ ಸಂಚಿಕೆಯಲ್ಲಿ ಮನೆಯಲ್ಲಿ ಜಾಹ್ನವಿಯ 11ನೇ ದಿನದ ಕಾರ್ಯಗಳು ನಡೆಯುತ್ತಿವೆ, ಮನೆಮಂದಿಯೆಲ್ಲಾ ಒಟ್ಟಾಗಿ ಮನೆಮಗಳು ಜಾನುವಿನ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಅಗಲಿದ ಅವಳ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಪುರೋಹಿತರು ಬಂದು ಜಾಹ್ನವಿಯ ಶ್ರಾದ್ಧ ಕಾರ್ಯ ಎಲ್ಲ ಕೆಲಸ ನಿರ್ವಹಿಸುತ್ತಿದ್ದಾರೆ. ಅಷ್ಟರಲ್ಲಿ ಜಯಂತನೂ ಬಂದಿದ್ದಾನೆ. ಅವನ ಬೇಸರದ ಮುಖ ನೋಡುತ್ತಲೇ ಲಕ್ಷ್ಮೀಗೆ ತಡೆಯಲಾಗದೇ ಅವಳು ಜಾಹ್ನವಿಯನ್ನು ನೆನೆದು ಅತ್ತಿದ್ದಾಳೆ. ಶ್ರೀನಿವಾಸ್, ಜಾಹ್ನವಿಗೆ ಸಮಾಧಾನ ಮಾಡಿದ್ದಾರೆ.

ಬಳಿಕ ಪುರೋಹಿತರು, ಕಾಗೆಗೆ ಇಡಲು ಪಿಂಡ ಮತ್ತು ಆಹಾರವನ್ನು ಮನೆಯ ಹೊರಗೆ ಇಟ್ಟುಬಿಡಿ, ಅವರು ಯಾವ ರೂಪದಲ್ಲಾದರೂ ಬಂದು ಅದನ್ನು ಸೇವಿಸುತ್ತಾರೆ ಎನ್ನುತ್ತಾರೆ. ಅದಕ್ಕೆ ಜಯಂತ ಒಲ್ಲದ ಮನಸ್ಸಿನಿಂದ ಸರಿ ಎನ್ನುತ್ತಾನೆ. ಶ್ರೀನಿವಾಸ್ ಮತ್ತು ಜಯಂತ ಮನೆಯ ಹೊರಗೆ, ಮರದ ಕೆಳಗೆ ಅದನ್ನು ಇಟ್ಟು ಬರುತ್ತಾರೆ...