Bengaluru, ಏಪ್ರಿಲ್ 20 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾಹ್ನವಿಯನ್ನು ಹುಡುಕುವ ಜಯಂತನ ಪ್ರಯತ್ನ ಮುಂದುವರಿದಿದೆ. ಮತ್ತೊಂದೆಡೆ ಲಕ್ಷ್ಮೀ ನಿವಾಸದಲ್ಲಿ ಮನೆಯವರು ಎಲ್ಲರೂ ಜಾಹ್ನವಿಯ ಕಾರ್ಯ ಮತ್ತು ಶ್ರಾದ್ಧದಲ್ಲಿ ತೊಡಗಿದ್ದಾರೆ. ಇನ್ನೊಂದೆಡೆ ಜಾಹ್ನವಿ ಮಾತ್ರ ನರಸಿಂಹನ ಮನೆ ಸೇರಿಕೊಂಡಿದ್ದಾಳೆ. ಅಲ್ಲಿ ಅವಳು ವಿಶ್ವನ ಕಣ್ಣು ತಪ್ಪಿಸಿ ಓಡಾಡಿಕೊಂಡಿದ್ದಾಳೆ. ಹೀಗಿರುವಾಗ ವಿಶ್ವ ಜಾಹ್ನವಿಯ ಇರುವಿಕೆಯನ್ನು ಪತ್ತೆಹಚ್ಚುವನೇ ಅಥವಾ ಇಲ್ಲವೇ ಎನ್ನುವುದು ಕುತೂಹಲ ಕೆರಳಿಸುವಂತಿದೆ. ಮತ್ತೊಂದೆಡೆ ಜಯಂತ, ಜಾಹ್ನವಿಯನ್ನು ಹುಡುಕಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾನೆ. ಅದರಲ್ಲೂ ಡಿಟೆಕ್ಟಿವ್ ಏಜೆನ್ಸಿಯನ್ನು ಹಿಡಿದು, ಅವರ ಮೂಲಕ ಜಾನುವಿನ ಪತ್ತೆಗೆ ಯತ್ನಿಸುತ್ತಿದ್ದಾನೆ.

ಇತ್ತ ಇನ್ನೊಂದೆಡೆ ಸಂತೋಷನಿಗೆ, ತನ್ನ ಐದು ಲಕ್ಷ ರೂ. ಹಣ ಕದ್ದಿರುವುದು ತನ್ನ ಸ್ವಂತ ತಮ್ಮ ಹರೀಶ ಎಂದು ಅರಿವಾಗಿದೆ. ಅಲ್ಲದೆ, ಸಿಂಚನಾ ಒಡವೆಯನ್ನು ನಕಲಿ ಮಾಡಿ, ಎಗರಿಸಿ, ಫೈನಾನ್ಸ್‌ನಲ್ಲಿ ಇರಿಸಿದ್ದು ಮತ್ತು ಹ...