Bengaluru, ಮಾರ್ಚ್ 8 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಮಾರ್ಚ್ 7ರ ಸಂಚಿಕೆಯಲ್ಲಿ ಮನೆಗೆ ಅಜ್ಜಿಯನ್ನು ಕರೆದುಕೊಂಡು ಬಂದಿರುವುದಕ್ಕೆ ಸಂತೋಷ್ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಹರೀಶ್ ಕೂಡ ಮೊದಲು ಬೇಡ ಎಂದರೂ, ಮತ್ತೆ ಸುಮ್ಮನಾಗಿದ್ದಾನೆ. ಸಂತೋಷ್ ಕಿರಿಕಿರಿ ಮಾಡುತ್ತಿರುವುದನ್ನು ಗಮನಿಸಿದ ಶ್ರೀನಿವಾಸ್, ಅಜ್ಜಿ ಮನೆಯಲ್ಲೇ ಇರುತ್ತಾರೆ, ಇದು ಬಾಡಿಗೆ ಮನೆ, ಇದರಲ್ಲೂ ಭಾಗ ಮಾಡಿ, ಅದು ನನ್ನದು, ಇದು ನನ್ನದು ಎನ್ನುತ್ತಿದ್ದೀರಿ, ನಿಮಗೆ ನಾಚಿಕೆಯಾಗಬೇಕು, ಬಾಲ್ಯದಲ್ಲಿ ನಿಮ್ಮನ್ನು ಕಷ್ಟಪಟ್ಟು ನೋಡಿಕೊಂಡ ಅಜ್ಜಿಗೇ ಹೀಗೆ ಹೇಳುತ್ತಿದ್ದೀರಿ, ಅವರ ನೆಮ್ಮದಿಗೆ ಭಂಗ ಉಂಟುಮಾಡಿದರೆ ನಾನು ಸುಮ್ಮನಿರುವುದಿಲ್ಲ. ಹುಷಾರಾಗಿರಿ ಎಂದು ಜೋರಾಗಿಯೇ ಎಚ್ಚರಿಕೆ ಕೊಡುತ್ತಾರೆ. ಅದನ್ನು ಕೇಳಿ ಸಂತೋಷ್ ಮತ್ತು ಹರೀಶ್ ಗಾಬರಿಯಾಗುತ್ತಾರೆ.

ಮನೆಯಲ್ಲಿ ವೀಣಾ ಜತೆ ಪ್ರತಿ ವಿಚಾರಕ್ಕೂ ಸಿಂಚನಾ ಕಿರಿಕಿರಿ ಮಾಡುತ್ತಿದ್ದಾಳೆ. ಬಟ್ಟೆ ಒಗೆಯುವ ವಿಚಾರಕ್ಕೂ ಸಿಂಚನಾ, ವೀಣಾ ಜತೆ ಜಗಳ ಮಾಡಲು ಮುಂದಾಗಿದ್...