Bengaluru, ಏಪ್ರಿಲ್ 19 -- ಟಿವಿ ಜಾಹೀರಾತುಗಳಲ್ಲಿ, ಸಿನಿಮಾ ಮತ್ತು ಒಟಿಟಿ ಸಿರೀಸ್‌ಗಳಲ್ಲಿ ಇಂದು ಬಹಳಷ್ಟು ಸಂದರ್ಭದಲ್ಲಿ ಹೆಣ್ಣನ್ನು ಒಂದು ಭೋಗದ ವಸ್ತುವಾಗಿ ಚಿತ್ರಿಸಲಾಗುತ್ತದೆ. ಜತೆಗೆ ಹೆಣ್ಣಿನ ವರ್ಣನೆ ಮಾಡುವಾಗಲೂ ಕೆಲವೊಂದು ವಿಶೇಷಣಗಳನ್ನು ಬಳಸಿಕೊಳ್ಳಲಾಗುತ್ತದೆ. ಪುರುಷ ಪ್ರಧಾನ ಸಮಾಜವೇ ಇದನ್ನು ಮಾಡುತ್ತಿದೆ ಎಂದು ಕಂಡುಬಂದರೂ, ಮಹಿಳೆಯರು ತಮ್ಮ ಮೇಲಾಗುವ ದೌರ್ಜನ್ಯ ಮತ್ತು ಶೋಷಣೆ ವಿರುದ್ಧ ಸೂಕ್ತ ರೀತಿಯಲ್ಲಿ ಪ್ರತಿಭಟಿಸುತ್ತಿಲ್ಲ ಮತ್ತು ವಿರೋಧ ವ್ಯಕ್ತಪಡಿಸುವವರು ಬಹಳ ಕಡಿಮೆ. ಈ ಬಗ್ಗೆ ರೂಪಾ ರಾವ್ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, ಅವರ ಬರಹದ ಯಥಾವತ್ ರೂಪ ಇಲ್ಲಿದೆ.

ಈ ಮೊ*ಲೆ ಕೋ*ಶ/ ಯೋ*ನಿ ತೊ*ಡೆ ಇವೆಲ್ಲಾ ಕತೆ ಕವನಗಳಲ್ಲಿ ಇದೇ ಮೊದಲೇನಲ್ಲ , ಬಹಳಷ್ಟು ಕಥೆಗಳಲ್ಲಿ ಓದುಗರನ್ನು ಸೆಳೆಯಲು ಉಪಯೋಗಿಸುವ ತಂತ್ರವೇ ಇದು.

ಅದು ಐತಿಹಾಸಿಕ ಕಥೆಗಳಿರಬಹುದು, ಅಥವಾ ಪೌರಾಣಿಕ ಕಾದಂಬರಿ ಇರಬಹುದು, ಅಥವಾ ಸಾಮಾಜಿಕ ಕಥೆಗಳಿರಬಹುದು. ಹೆಣ್ಣಿನ ಮೊ* ಎಂಬ ಅಂಗಕ್ಕೆ‌ ಬೆಣ್ಣೆ‌, ಮೆತ್ತಗೆ , ದಪ್...