ಭಾರತ, ಏಪ್ರಿಲ್ 9 -- Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 8ರ ಸಂಚಿಕೆಯಲ್ಲಿ ಐಶುವನ್ನು ಕಾಪಾಡಲು ಹೋಗಿ ತಾನು ಬಿದ್ದು ಪೆಟ್ಟು ಮಾಡಿಕೊಳ್ಳುತ್ತಾಳೆ ಶ್ರಾವಣಿ. ಪದ್ಮನಾಭ, ವಿಶಾಲಾಕ್ಷಿ ಹಾಗೂ ಸುಬ್ಬು ಮೂವರು ಶ್ರಾವಣಿಗೆ ಬಿದ್ದು ಪೆಟ್ಟಾಗಿದೆ ಎಂಬ ಬೇಸರದಲ್ಲಿದ್ದರೆ, ಶ್ರಾವಣಿಯನ್ನು ಕಂಡರೆ ಉರಿದು ಬೀಳುವ ಧನಲಕ್ಷ್ಮೀ ಅವಳು ತನ್ನ ಮಗಳಿಗೆ ಬಾಲ್ ಕೊಡಿಸಿದ್ದೇ ಇಷ್ಟೆಲ್ಲಾ ಆಗಲು ಕಾರಣ ಎಂದು ಬಯ್ಯುತ್ತಾಳೆ. ಶ್ರಾವಣಿಗೆ ಬಿದ್ದ ನೋವಿಗಿಂತ ಅತ್ತಿಗೆ ಆಡಿದ ಮಾತುಗಳೇ ಹೆಚ್ಚು ನೋವು ತರಿಸುತ್ತದೆ. ಈ ನಡುವೆ ಸುಂದರ ಹಾಗೂ ಕಾಂತಮ್ಮ ಕೂಡ ಶ್ರಾವಣಿಯನ್ನು ಆಡಿಕೊಂಡು ನಗುತ್ತಾರೆ. ಸೊಸೆ ಶ್ರಾವಣಿಗೆ ಬೈದಿರುವುದು ಕಾಂತಮ್ಮನಿಗೆ ಬಹಳ ಖುಷಿ ತಂದಿರುತ್ತದೆ.

ನೆಲದಲ್ಲಿ ಬಿದ್ದ ಶ್ರಾವಣಿಯ ಬಳಿ ಹೋಗಿ 'ಪೆಟ್ಟಾಯ್ತಾ ಮೇಡಂ, ಹುಷಾರಾಗಿ ಇರ್ಬೇಕು ಅಲ್ವಾ' ಎಂದು ಕೇಳುವ ಸುಬ್ಬು ಅವಳನ್ನು ಎತ್ತಿ ನಿಲ್ಲಿಸಲು ಪ್ರಯತ್ನ ಮಾಡುತ್ತಾನೆ. ಪದ್ಮನಾಭ, ವಿಶಾಲಾಕ್ಷಿ ಕೂಡ ಅವನಿಗೆ ಜೊತೆಯಾಗುತ್ತಾ...