Bengaluru, ಏಪ್ರಿಲ್ 13 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಏಪ್ರಿಲ್ 11ರ ಸಂಚಿಕೆಯಲ್ಲಿ ಜಾಹ್ನವಿ ಇಲ್ಲದ ಮನೆ, ಬದುಕನ್ನು ಊಹಿಸಿಕೊಳ್ಳಲು ಕೂಡ ಜಯಂತನಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವನು ಮನೆಯ ತುಂಬಾ ಚಿನ್ನುಮರಿ, ಚಿನ್ನು ಮರೀ ಎಂದು ಕೂಗುತ್ತಾ ಅಲೆದಾಡುತ್ತಿದ್ದಾನೆ. ಮನೆಯಲ್ಲಿ ಜಾಹ್ನವಿ ಫೋಟೊಗೆ ಶಾರದಮ್ಮ ಇರಿಸಿದ ಹೂವು, ಅಗರಬತ್ತಿಯನ್ನು ಕೂಡ ಜಯಂತ ಹೊರಗೆ ಎಸೆದಿದ್ದಾನೆ. ನನ್ನ ಚಿನ್ನುಮರಿ ಸತ್ತಿಲ್ಲ, ಅವಳು ಇನ್ನೂ ಬದುಕಿದ್ದಾಳೆ. ಹೀಗಿರುವಾಗ ನೀವು ಅವಳನ್ನು ಹೀಗೆ ಪೂಜೆ ಮಾಡುವುದು, ಕಾರ್ಯ ಮಾಡುವುದು ಸರಿಯಲ್ಲ, ಅದನ್ನು ನಾನು ಇಷ್ಟಪಡುವುದಿಲ್ಲ, ನನ್ನ ಚಿನ್ನುಮರಿ ಮತ್ತೆ ವಾಪಸ್ ಬರುತ್ತಾಳೆ ಎಂದು ಹೇಳುತ್ತಾನೆ. ಹೀಗಾಗಿ ಶಾರದಮ್ಮ ಸುಮ್ಮನಾಗುತ್ತಾರೆ.

ಮತ್ತೊಂದೆಡೆ ಚೆಲ್ವಿ ದೂರಿನ ಕುರಿತು ಈಗ ಜವರೇಗೌಡ್ರ ಮನೆಯಲ್ಲಿ ಹೊಸ ಸಮಸ್ಯೆ ಶುರುವಾಗಿದೆ. ಎಲ್ಲ ಮುಗಿದು, ಪರಿಸ್ಥಿತಿ ಶಾಂತವಾಗಿದೆ ಎನ್ನುವಾಗ, ಆಕ್ಸಿಡೆಂಟ್ ಕೇಸ್‌ನಲ್ಲಿ ಜವರೇಗೌಡ್ರ ಮಗ ಸಿದ್ದೇಗೌಡನ ಬದಲಿಗ...