Bangalore, ಏಪ್ರಿಲ್ 25 -- ಬೆಂಗಳೂರು: 10 ವರ್ಷಗಳ ಹಿಂದಿನ ಜಾತಿಗಣತಿ ವರದಿ ಬಹಿರಂಗಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಒಪ್ಪಿಕೊಂಡಿಯೂ ಆಗಿದೆ. ಆದರೆ ಈ ವರದಿಯನ್ನು ಒಪ್ಪಿಕೊಂಡರೆ ಉಂಟಾಗುವ ರಾಜಕೀಯ ಕ್ಷೋಭೆಗಳ ಕಾರಣಕ್ಕೆ ಜಾರಿ ತಡವಾಗುತ್ತಿದೆ. 2015ರ ಏಪ್ರಿಲ್‌- ಮೇ ತಿಂಗಳಲ್ಲಿ 1.35 ಕೋಟಿ ಮನೆಗಳಿಗೆ ಭೇಟಿ ನೀಡಲಾಗಿದೆ. ಜಾತಿಗಣತಿ ನಡೆದಾಗ 6.35 ಕೋಟಿ ಜನಸಂಖ್ಯೆಯಿದ್ದು ಸುಮಾರು 5.98 ಜನರ ಮಾಹಿತಿ ಸಂಗ್ರಹಿಸಲಾಗಿದೆ (ಶೇ. 95 ರಷ್ಟು). 2011 ರ ಜನಗಣತಿ ಪ್ರಕಾರ ರಾಜ್ಯದಲ್ಲಿ 6.11 ಕೋಟಿ ಜನಸಂಖ್ಯೆ ಇದೆ. 2017ರ ಅಂತ್ಯದ ವೇಳೆಗೆ ವರದಿ ಸಿದ್ದವಾಗಿದ್ದರೂ ಸದಸ್ಯ ಕಾರ್ಯದರ್ಶಿ ಸಹಿ ಹಾಕದ ಕಾರಣಕ್ಕೆ ಆಗಿನ ಅಧ್ಯಕ್ಷ ಕಾಂತರಾಜು ಅವರು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಲಿಲ್ಲ. ನಂತರ ಬಂದ ಜೆಡಿಎಸ್‌ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವೂ ವರದಿಯನ್ನು ಸ್ವೀಕರಿಸಲಿಲ್ಲ. ತದನಂತರ ರಚನೆಯಾದ ಬಿಜೆಪಿ ಸರ್ಕಾರವೂ ವರದಿಯನ್ನು ಸ್ವೀಕರಿಲು ಹಿಂದೇಟು ಹಾಕಿತು.

ಈಗಿನ ಕಾಂಗ್ರೆಸ್‌ ಸರ್ಕಾರ ವರದಿಯನ್ನು ಸ್ವೀ...