ಭಾರತ, ಏಪ್ರಿಲ್ 22 -- ಬೆಂಗಳೂರು: ಜಾತಿ ಗಣತಿ ವರದಿಯಿಂದ ವೀರಶೈವ ಲಿಂಗಾಯತರು ಮತ್ತು ಒಕ್ಕಲಿಗರಿಗಿಂತ ಅತಿ ಹೆಚ್ಚು ಬೆದರಿರುವುದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಎಂದು ರಾಜಕೀಯ ವಲಯಗಳಲ್ಲಿ ಬಲವಾಗಿ ಚರ್ಚೆಯಾಗುತ್ತಿದೆ. ಈ ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಿದಾಗಿನಿಂದ ಅವರು ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿದ್ದಾರೆ ಮತ್ತು ಪ್ರತಿಯೊಂದು ಪದವನ್ನೂ ಅಳೆದೂ ತೂಗಿ ಪ್ರತಿಕ್ರಿಯಿಸುತ್ತಿದ್ದಾರೆ. ಶಿವಕುಮಾರ್‌ ಅವರ ಒಂದು ತಪ್ಪು ಹೆಜ್ಜೆ ಒಕ್ಕಲಿಗರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಇಲ್ಲವೇ ಪಕ್ಷದ ವರಿಷ್ಠ ರಾಹುಲ್‌ ಗಾಂಧಿ ಅವರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಜತೆಗೆ ಅವರ ರಾಜಕೀಯ ಭವಿಷ್ಯವೂ ಮುಸುಕಾಗುವುದರಲ್ಲಿ ಸಂಶಯವೇ ಇಲ್ಲ.

ಈ ಹಿಂದೆ ಶಿವಕುಮಾರ್‌ ಅವರು ಜಾತಿ ಗಣತಿ ವರದಿ ಜಾರಿಯಾದರೆ ಒಕ್ಕಲಿಗರಿಗೆ ಬಾರಿ ಅನ್ಯಾಯವಾಗಲಿದೆ ಎಂದು ಕಿಡಿ ಕಾರುತ್ತಿದ್ದರು. ಸಮೀಕ್ಷೆ ನಡೆಸಿದ ಎಚ್.‌ ಕಾಂತರಾಜು ವರದಿಯನ್ನು ಕಟುವಾಗಿ ಟೀಕಿಸಿದ್ದರು. ಆದರೆ ಈಗ ಸಂಪುಟದಲ್ಲಿ ಮಂಡನೆಯಾಗಿ ಜಾರಿ ಕುರಿತು ಚರ್ಚೆ ನಡೆಯುತ್ತ...