ಭಾರತ, ಜೂನ್ 11 -- ಬೆಂಗಳೂರು: ಕರ್ನಾಟಕದಲ್ಲಿ ನಡೆಸಿದ ಜಾತಿ ಗಣತಿ ವರದಿ 10 ವರ್ಷಗಳಷ್ಟು ಹಳೆಯದಾಗಿದ್ದು, ಹೊಸದಾಗಿ ಜಾತಿಗಣತಿ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಜಾತಿಗಣತಿಗೆ ಸಾಕಷ್ಟು ಅಪಸ್ವರ ಕೇಳಿ ಬಂದ ಬೆನ್ನಲ್ಲೇ ಪಕ್ಷದ ವರಿಷ್ಠರು ಹೊಸದಾಗಿ ಜಾತಿ ಗಣತಿ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಿಗೆ ಸೂಚನೆ ನೀಡಿದ್ದಾರೆ. ಕಾಲಮಿತಿಯಲ್ಲಿ ಜಾತಿಗಣತಿ ನಡೆಸಲೂ ವರಿಷ್ಠರು ಸಲಹೆ ನೀಡಿದ್ದಾರೆ.

ಜಾತಿ ಸಮೀಕ್ಷೆಗೆ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ಪ್ರಬಲ ವಿರೋಧ ವ್ಯಕ್ತಪಡಿಸಿದ್ದವು. ಈ ಎರಡೂ ಪ್ರಬಲ ಕೋಮುಗಳ ಸಚಿವರು, ಶಾಸಕರು, ಮಠಾಧೀಶರು ಮತ್ತು ಮುಖಂಡರ ಒತ್ತಡಕ್ಕೆ ಸರ್ಕಾರ ಮಣಿದಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಜಾತಿಗಣತಿ ನಡೆಸುವ ಸಂಬಂಧ ಚರ್ಚಿಸಲು ಜೂನ್ 12 , ನಾಡಿದ್ದು ಗುರುವಾರ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ಎಲ್ಲಾ ಜಾತಿಗಳ ಹೊಸ ಅಂಕಿಅಂಶ ಸಂಗ್ರಹಣೆಗೆ ನಿರ್ಧರಿಸಲಾಗಿದ್ದು, ಹಳೆ ಜಾತಿಗಣತಿ ವರದಿಗೆ ಹೊಸ ಅಂಕಿ ಸಂಖ್ಯೆ ಸೇರ್ಪಡೆ ಮಾ...