Bengaluru, ಮೇ 25 -- ಭಾರತದಲ್ಲಿ ಅನೇಕ ದೇವಾಲಯಗಳಿವೆ. ಅದರಲ್ಲಿ ಕೆಲವು ಅದ್ಭುತ ಶಿಲ್ಪಕಲೆಗೆ ಹೆಸರುವಾಸಿಯಾಗಿದ್ದರೆ, ಕೆಲವು ಮಹಿಮೆಗೆ ಹೆಸರಾಗಿದೆ. ಬಹಳಷ್ಟು ದೇವಸ್ಥಾನಗಳು ಜಾತಕದಲ್ಲಿನ ದೋಷ ನಿವಾರಣೆಗೆ ಹೆಸರುವಾಸಿಯಾಗಿದೆ. ಕೆಲವು ದೇವಸ್ಥಾನಗಳಲ್ಲಿ ಪೂಜೆ ಮಾಡಿಸಿದರೆ ಸರ್ಪದೋಷ ನಿವಾರಣೆಯಾಗುತ್ತದೆ. ಕೆಲವೆಡೆ ಮದುವೆಗೆ ಇದ್ದ ಅಡೆತಡೆಗಳು ದೂರಾಗುತ್ತದೆ. ಹಾಗೇ ಕೆಲವು ದೇವಸ್ಥಾನಗಳಲ್ಲಿ ಪೂಜೆ ಮಾಡಿಸಿದರೆ ಎಷ್ಟೋ ವರ್ಷಗಳಿಂದ ಮಕ್ಕಳಾದವರಿಗೆ ಮಕ್ಕಳಾಗುತ್ತದೆ. ಅವುಗಳಲ್ಲಿ ಕಾಕಣಿ ಕ್ಷೇತ್ರ ಕೂಡಾ ಒಂದು.

ಕಾಕಣಿ ಕ್ಷೇತ್ರ ಗುಂಟೂರು ಜಿಲ್ಲೆಯಲ್ಲಿರುವ ಪುಣ್ಯಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರಕ್ಕೆ ಹೋಗಿ ಪೂಜೆ ಸಲ್ಲಿಸಿದರೆ ಗ್ರಹಬಾಧೆ ನಿವಾರಣೆಯಾಗುತ್ತದೆ. ಕಾಳಸರ್ಪ ದೋಷ, ರಾಹು ಕೇತುಗಳಂತಹ ದೋಷಗಳನ್ನು ನಿವಾರಿಸಲು ಮತ್ತು ಸಂತಾನಹೀನತೆಯಿಂದ ಉಂಟಾಗುವ ದೋಷಗಳನ್ನು ತೊಡೆದುಹಾಕಲು ಅತ್ಯಂತ ಪವಿತ್ರವಾದ ಸ್ಥಳವಾಗಿದೆ ಎಂದು ಖ್ಯಾತ ಆಧ್ಯಾತ್ಮ ಮತ್ತು ಜ್ಯೋತಿಷಿ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಮಾ...