ಭಾರತ, ಏಪ್ರಿಲ್ 20 -- ವಿಶ್ವದಲ್ಲಿ ಐಪಿಎಲ್​​ ಟೂರ್ನಿಗಿರುವ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಬಹುತೇಕ ದೇಶಗಳಲ್ಲಿ ಶ್ರೀಮಂತ ಲೀಗ್ ನೋಡುವ ಜನರಿದ್ದಾರೆ. ವರ್ಷದಿಂದ ವರ್ಷಕ್ಕೆ ಐಪಿಎಲ್ ನೋಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಲೀಗ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಹೀಗಿದ್ದರೂ ಪಾಕಿಸ್ತಾನದ ಜನತೆ ಪಾಕಿಸ್ತಾನ ಸೂಪರ್​ ಲೀಗ್ ದೊಡ್ಡದು ಎಂದು ಬಡಾಯಿ ಕೊಚ್ಚಿಕೊಳ್ಳುವುದು ನಿಲ್ಲಿಸಿಲ್ಲ. ಆದರೆ ಪಿಎಸ್​ಎಲ್​ ಕ್ರೇಜ್ ಎಷ್ಟಿದೆ ಎನ್ನುವುದಕ್ಕೆ ಸಂಬಂಧಿಸಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಪಿಎಸ್ಎಲ್​ಗೆ ಜಾಗತಿಕ ಮಟ್ಟದಲ್ಲಿ ಮುಖಭಂಗವಾಗುವಂತಿದೆ ಈ ವಿಡಿಯೋ.

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮತ್ತು ಪಾಕಿಸ್ತಾನ ಸೂಪರ್ ಲೀಗ್ (PSL) ಎರಡು ಟಿ20 ಫ್ರಾಂಚೈಸ್​ಗಳು ಒಟ್ಟಿಗೆ ನಡೆಯುತ್ತಿವೆ. ಆದರೆ ಪಿಎಸ್​ಎಲ್ ನೋಡುಗರ ಸಂಖ್ಯೆ ವಿಪರೀತ ಕುಸಿದಿದೆ. ವೀಕ್ಷಿಸಿದರೂ ಬೋರ್ ಹೊಡೆಸುತ್ತಿದೆ. ಬೇರೆ ದೇಶದವರು ಇರಲಿ, ಅವರ ದೇಶದವರಿಗೇ ಪಿಎಸ್​ಎಲ್ ಬೇಡವಾಗಿದೆ. ಪಿಎಸ್​ಎಲ್ ವೀಕ್ಷಿಸಲು ...