Bengaluru, ಫೆಬ್ರವರಿ 6 -- ಟಾಲಿವುಡ್‌ನಲ್ಲಿ ನಿರ್ಮಾಣವಾದ 'ಆರ್‌ಆರ್‌ಆರ್' ಸಿನಿಮಾ ಕೇವಲ ತೆಲುಗು ಪ್ರೇಕ್ಷಕರಿಗೆ ಮತ್ತು ಭಾರತೀಯರನ್ನಷ್ಟೇ ಸೆಳೆದಿಲ್ಲ. ಜಾಗತಿಕ ಮಟ್ಟದಲ್ಲಿಯೂ ಸದ್ದು ಮಾಡಿತು ರಾಜಮೌಳಿಯ ಈ ಸಿನಿಮಾ. ಗಳಿಕೆಯ ನಾಗಾಲೋಟ ಮುಂದುವರಿಸಿ, ಸಾವಿರಾರು ಕೋಟಿ ಕಮಾಯಿ ಮಾಡಿದ್ದೂ ದಾಖಲೆಯೇ. ಈ ಒಂದು ಸಿನಿಮಾದಿಂದ ಜೂನಿಯರ್‌ ಎನ್‌ಟಿಆರ್‌ ಮತ್ತು ರಾಮ್‌ ಚರಣ್‌ ತೇಜ ಭಾರತದಾಚೆಗೂ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡರು. ಇದರಾಚೆಗೆ ಇದೇ ಚಿತ್ರದ ನಾಟು ನಾಟು ಹಾಡಿಗೆ ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಯೂ ಒಲಿದು ಬಂದಿತು. ಆ ಹಾಡು, ಅದರಲ್ಲಿನ ಕುಣಿತ ವಿದೇಶಿಗರನ್ನೂ ಸೆಳೆದಿತ್ತು. ಈಗ ಇದೇ ನಾಟು ನಾಟು ಹಾಡು ಫುಟ್ಬಾಲ್‌ ತಾರೆಯರ ವಿಚಾರಕ್ಕೆ ಸುದ್ದಿಯಲ್ಲಿದೆ.

ಎಸ್.ಎಸ್. ರಾಜಮೌಳಿ ಅವರ ಆರ್‌ಆರ್‌ಆರ್‌ ಸಿನಿಮಾ ಬಿಡುಗಡೆಯಾಗಿ ಮೂರು ವರ್ಷಗಳು ಕಳೆದಿವೆ. ಹೀಗಿರುವಾಗಲೇ ಇದೇ ಸಿನಿಮಾದ ಪೋಸ್ಟರ್‌ವೊಂದು ಪ್ರತಿಷ್ಠಿತ ಫಿಫಾ ವಿಶ್ವಕಪ್‌ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿದೆ. ಈ ಚಿತ್ರದ ನಾಟು ನ...