ಭಾರತ, ಮಾರ್ಚ್ 18 -- ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವ ಟೀಮ್ ಇಂಡಿಯಾ ಇದೀಗ 18ನೇ ಆವೃತ್ತಿಯ ಐಪಿಎಲ್ ಮಧ್ಯೆಯೇ 2026ರ ಟಿ20 ವಿಶ್ವಕಪ್ ಸಿದ್ಧತೆ ಆರಂಭಿಸಲಿದೆ. ಮುಂದಿನ ವರ್ಷ ಫೆಬ್ರವರಿ - ಮಾರ್ಚ್​ನಲ್ಲಿ ಐಸಿಸಿ ಮಿನಿ ಸಮರ ನಡೆಯುವ ಕಾರಣ ಬಿಸಿಸಿಐ ಪಾಲಿಗೆ ಈ ಐಪಿಎಲ್​ ಮಹತ್ವದ್ದಾಗಿದೆ. ಸತತ 2ನೇ ಟ್ರೋಫಿ ಹಾಗೂ ಸೀಮಿತ ಓವರ್‌ಗಳ ಹ್ಯಾಟ್ರಿಕ್ ಐಸಿಸಿ ಪ್ರಶಸ್ತಿಗೆ ಮುತ್ತಿಕ್ಕಲು ಆಟಗಾರರ ಪ್ರದರ್ಶನ, ತಂಡವನ್ನು ರಚಿಸಲು ಮತ್ತು ಅಂತಿಮ ಸಿದ್ಧತೆ ರೂಪಿಸಲು ಇದೊಳ್ಳೆ ಅವಕಾಶವೂ ಹೌದು. ಹಾಗಾದರೆ ಚುಟುಕು ಸಮರಕ್ಕೆ ಭಾರತದ ಸಂಭಾವ್ಯ ತಂಡ ಹೇಗಿರಲಿದೆ? ಇಂತಿದೆ ವಿವರ.

2024ರ ಟಿ20 ವಿಶ್ವಕಪ್ ಗೆದ್ದುಕೊಂಡಿರುವ ಭಾರತ 2025ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಒಲಿಸಿಕೊಂಡಿದೆ. ಇದೀಗ 2026ರ ಟಿ20 ವಿಶ್ವಕಪ್‌ ಮೇಲೆ ಕಣ್ಣಿಟ್ಟಿದೆ. ಅದಕ್ಕೆ ಸುಮಾರು ಒಂದು ವರ್ಷ ಬಾಕಿ ಇದೆ. ಆದರೆ, ಮೆಗಾ ಟೂರ್ನಿಗೆ ಐಪಿಎಲ್​ನಿಂದಲೇ ಸಿದ್ಧತೆಗಳು ಪ್ರಾರಂಭವಾಗಲಿವೆ. ಟಿ20 ವಿಶ್ವಕಪ್‌ಗೆ ಮೊದಲು ಐಪಿಎಲ್​​ನಲ್ಲಿ ಭಾರತದ ಆಟಗಾರರು ...