ಭಾರತ, ಮಾರ್ಚ್ 25 -- ಟಿ20 ವಿಶ್ವಕಪ್ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ನಂತರ, ಭಾರತ ತಂಡವು ಈಗ ಮುಂದಿನ ದೊಡ್ಡ ಟೂರ್ನಿಯಾದ 2026ರ ಐಸಿಸಿ ಟಿ20 ವಿಶ್ವಕಪ್ ಮೇಲೆ ಗಮನ ಹರಿಸಲಿದೆ. ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾ ಈ ಟೂರ್ನಿಯನ್ನು ಆಯೋಜಿಸಲಿವೆ. ಈ ಟೂರ್ನಿಗೂ ಮುನ್ನ, ಸೆಪ್ಟೆಂಬರ್ 2025ರಲ್ಲಿ ಟಿ20 ಸ್ವರೂಪದಲ್ಲಿ ನಡೆಯಲಿರುವ ಟಿ20 ಏಷ್ಯಾ ಕಪ್ ನಡೆಯಲಿದ್ದು, ಏಷ್ಯನ್ ತಂಡಗಳು ಐಸಿಸಿ ಟೂರ್ನಿಗೆ ಸಿದ್ಧತೆ ಮಾಡಿಕೊಳ್ಳಲಿವೆ.

ಏಷ್ಯಾಕಪ್‌ನಲ್ಲಿ ಭಾಗವಹಿಸುವ ತಂಡವು ಟಿ20 ವಿಶ್ವಕಪ್‌ನಲ್ಲಿಯೂ ಆಡುವ ಸಾಧ್ಯತೆಯಿದೆ. ಇದು ಎಂಟು ತಂಡಗಳ ಟೂರ್ನಿಯಾಗಿದ್ದು, ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಯುಎಇ, ಹಾಂಗ್ ಕಾಂಗ್ ಮತ್ತು ಓಮನ್ ಭಾಗವಹಿಸಲಿವೆ. ಜುಲೈ-ಆಗಸ್ಟ್‌ನಲ್ಲಿ ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದ್ದು, ಟಿ20 ವಿಶ್ವಕಪ್ ಟೂರ್ನಿ ಭಾಗವಾಗುವ ಕೆಲವು ಆಟಗಾರರಿಗೆ ವಿಶ್ರಾಂತಿ ನೀಡಬಹುದು. ಕೆಲಸದ ಹೊರೆ ಇಳಿಸುವ ಸಲುವಾಗಿ​ ಜಸ್ಪ್ರೀತ್ ಬುಮ್ರಾಗೆ ಏಷ್ಯಾಕಪ್ ಟೂರ್ನಿಗೆ ವಿಶ್ರಾಂತ...