ಭಾರತ, ಏಪ್ರಿಲ್ 18 -- ಅಕ್ಷಯ್‌ ಕುಮಾರ್, ಅನನ್ಯಾ ಪಾಂಡೆ ಹಾಗೂ ಆರ್‌. ಮಾಧವನ್ ನಟಿಸಿರುವ ಕೇಸರಿ ಚಾಪ್ಟರ್ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ 106 ನೇ ವಾರ್ಷಿಕೋತ್ಸವದ ದಿನವಾದ ಇಂದು (ಏಪ್ರಿಲ್ 18) ಬಿಡುಗಡೆಯಾಗಿದೆ. 'ಕೇಸರಿ ಚಾಪ್ಟರ್ 2: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಜಲಿಯನ್ ವಾಲಾಬಾಗ್' ಎಂಬುದು ಈ ಚಿತ್ರ ಪೂರ್ಣ ಶೀರ್ಷಿಕೆ. ಐತಿಹಾಸಿಕ ಕಥಾಹಂದರ ಹಾಗೂ ನ್ಯಾಯಾಲಯ ಹಿನ್ನೆಲೆಯುಳ್ಳ ಈ ಚಿತ್ರಕ್ಕೆ ಸಿಂಗ್ ತ್ಯಾಗಿ ನಿರ್ದೇಶನವಿದೆ. ಧರ್ಮ ಪ್ರೊಡಕ್ಷನ್‌, ಲಿಯೊ ಮಿಡಿಯಾ ಕಲೆಕ್ಟಿವ್‌ ಮತ್ತು ಕೇಪ್ ಆಫ್ ಗುಡ್ ಫಿಲ್ಮಸ್‌ ಚಿತ್ರದ ನಿರ್ಮಾಣ ಹೊಣೆಯನ್ನು ಹೊತ್ತಿವೆ. ರಘು ಪಾಲಟ್ ಮತ್ತು ಪುಷ್ಪಾ ಪಾಲಟ್ ಅವರ'ದಿ ಕೇಸ್ ದಟ್ ಶಾಕ್‌ ದಿ ಎಂಪೈರ್' ಪುಸ್ತಕವನ್ನು ಆಧರಿಸಿದೆ. ಇದು ಸಿ. ಶಂಕರನ್ ನಾಯರ್ ಮತ್ತು 1919 ರ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಸುತ್ತ ಕೇಂದ್ರೀಕೃತವಾಗಿದೆ.

ಜಲಿಯನ್ ವಾಲಾಬಾಗ್ ದುರಂತದ ಕಥೆ ಹೇಳುವ ಕೇಸರಿ ಚಾಪ್ಟರ್ 2 ಚಿತ್ರ ಇಂದು ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ಎಲ್ಲೆಡೆ ಸಕಾರಾತ್ಮಕ ಮಾತುಗಳು ಕೇಳ...