Mysuru, ಜೂನ್ 23 -- ಭಾರತ ಮಾತ್ರವಲ್ಲದೇ ಜಗತ್ತಿನ ನಾನಾ ಭಾಗಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನದ ಚಟುವಟಿಕೆಗಳು. ಕೆಲವು ಕಡೆಗಳಲ್ಲಿ ವಿಶ್ವ ಸಂಗೀತ ದಿನದ ನಿನಾದವೂ ಜೋರಾಗಿಯೇ ಇತ್ತು. ಆದರೆ ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ಮಾತ್ರ ಭಿನ್ನ ವಾತಾವರಣ. ಬರ್ಲಿನ್‌ ನಗರದ ಶ್ರೀ ಗಣೇಶ ಹಿಂದೂ ದೇವಸ್ಥಾನ ಮತ್ತು ಹಸೆನ್‌ಹೈಡ್ ಪಾರ್ಕ್‌ನಲ್ಲಿ ಯೋಗ ಹಾಗೂ ಸಂಗೀತ ಸಮ್ಮಿಳನ. ಅದೂ ಮೈಸೂರಿನ ಪ್ರತಿಭೆಗಳ ಸಂಗಮ. ಯೋಗ ಹಾಗೂ ಸಂಗೀತದ ರಸದೌತಣವನ್ನು ವಿದೇಶಿ ನೆಲದಲ್ಲಿ ಹೆಮ್ಮೆಯಿಂದ ಪ್ರದರ್ಶಿಸಿ ಭಾರತದ ಹಿರಿಮೆ ಎತ್ತಿ ಹಿಡಿದ ಹೆಮ್ಮೆಯ ಕ್ಷಣ. ಯೋಗ ಮಾಡುತ್ತಲೇ ಸಂಗೀತದ ಕ್ಷಣದಲ್ಲಿ ಮಿಂದೆದ್ದವರು ಬರ್ಲಿನ್‌ನ ಸಂಸ್ಕೃತಿ ಪ್ರಿಯರು.

ಮೂಲತಃ ಮೈಸೂರಿನವರಾದ ಸದ್ಯ ಬರ್ಲಿನ್‌ನಲ್ಲಿ ಉನ್ನತ ಶಿಕ್ಷಣದಲ್ಲಿ ನಿರತರಾಗಿರುವ, ಎಂಜಿನಿಯರಿಂಗ್‌ ಶಿಕ್ಷಣ ಪಡೆದು ಸದ್ಯ ನರರೋಗಗಳ ತಜ್ಞತೆ ಹಾಗೂ ಯೋಗದ ಕುರಿತು ಅಧ್ಯಯನ ನಡೆಸಿರುವ ಅಭಯ್‌ ಕೌಶಿಕ್‌ ಈ ಕಾರ್ಯಕ್ರಮದ ರೂವಾರಿ. ಬೆಂಗಳೂರಿನಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಬಿಇ ಮುಗಿಸಿ ಸದ್ಯ ನ್ಯೂರೋ...