Bengaluru, ಮಾರ್ಚ್ 1 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಫೆಬ್ರುವರಿ 28ರ ಸಂಚಿಕೆಯಲ್ಲಿ ಶಿವರಾತ್ರಿ ಪೂಜೆಯ ಸಂಭ್ರಮ ನಡೆಯುತ್ತಿದೆ. ಸಿದ್ದೇಗೌಡ ಮತ್ತು ಭಾವನಾ ದಂಪತಿ, ದೇವಸ್ಥಾನಕ್ಕೆ ಹೋಗಿ ಪೂಜೆ ಶಾಸ್ತ್ರ ಮುಗಿಸಿಕೊಂಡು ಹೊರಡಲು ಅನುವಾಗಿದ್ದಾರೆ. ನಂತರ ಅಲ್ಲಿಯೇ ಇದ್ದ ತ್ರಿಕಾಲ ಜ್ಞಾನಿ ಮಹರ್ಷಿಗಳ ಬಳಿ ಹೋಗಿ, ದರ್ಶನ ಮಾಡಿ, ಅವರ ಆಶೀರ್ವಾದ ಪಡೆದಿದ್ದಾರೆ. ಸಿದ್ದೇಗೌಡ ಮತ್ತು ಭಾವನಾ ದಂಪತಿಯನ್ನು ಬರಮಾಡಿಕೊಂಡ ಮಹರ್ಷಿ, ನಂತರ ಒಗಟು ಒಗಟಾಗಿಯೇ ಮಾತನಾಡಿದ್ದಾರೆ. ಅವರ ಮಾತು ಕೇಳುತ್ತಲೇ ಸಿದ್ದೇಗೌಡನಿಗೆ ಮನಸ್ಸಿನಲ್ಲಿಯೇ ತಳಮಳ ಆರಂಭವಾಗಿದೆ.

ಮರಿಗೌಡ ಮತ್ತು ವಿನುವನ್ನು ದೇವಸ್ಥಾನಕ್ಕೆ ಹೋಗಲು ಹೇಳಿದ್ದೆ, ಆದರೆ ಜವರೇಗೌಡರು, ಸಿದ್ದೇಗೌಡ ಮತ್ತು ಭಾವನಾ ದಂಪತಿ ಹೋಗಿ ದೇವಸ್ಥಾನದಲ್ಲಿ ಪೂಜೆ ಮಾಡಿಸಿಕೊಂಡು ಬನ್ನಿ ಎಂದು ಕಳುಹಿಸಿದ್ದಾರೆ. ಅದಕ್ಕೆ ಜವರೇಗೌಡ ಪತ್ನಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೀವು ಹೇಳಿದ್ದರಿಂದಲೇ ಸಿದ್ದೇಗೌಡ ಮತ್ತು ಭಾವನಾ ದೇವಸ್ಥಾನಕ್ಕೆ ಹೋದರು, ಆದ...