Bengaluru, ಏಪ್ರಿಲ್ 8 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಏಪ್ರಿಲ್ 7ರ ಸಂಚಿಕೆಯಲ್ಲಿ ಜಾಹ್ನವಿ, ನರಸಿಂಹನ ಕಾರಿನಲ್ಲಿ ಅಡಗಿ ಕುಳಿತುಕೊಂಡು ಬಂದಿದ್ದಾಳೆ. ನರಸಿಂಹ ಚೆನ್ನೈನಿಂದ ಬಿಜಿನೆಸ್ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಕಾರಿನಲ್ಲಿ ಹೊರಟಿದ್ದಾನೆ. ಅವನ ಕಾರಿನಲ್ಲಿ ಗೊತ್ತಾಗದಂತೆ ಜಾನು ಅಡಗಿದ್ದಾಳೆ. ಮಾರ್ಗಮಧ್ಯೆ ಸ್ವಲ್ಪ ವಿರಾಮ ತೆಗೆದುಕೊಳ್ಳೋಣ ಎಂದು ನರಸಿಂಹ ಕಾರು ನಿಲ್ಲಿಸಿದ್ದಾನೆ. ಆಗ ಜಾಹ್ನವಿ ಮೆಲ್ಲನೆ ಕಾರಿನಿಂದ ಇಳಿದು ಹೊರಟಿದ್ದಾಳೆ. ಅವಳು ಇಳಿದು ಹೋಗಿರುವುದನ್ನು ಡ್ರೈವರ್ ಆಗಲಿ, ನರಸಿಂಹನಾಗಲಿ ಗಮನಿಸಿಲ್ಲ. ತುಸು ದೂರ ನಡೆದು ಹೋದ ಜಾಹ್ನವಿ, ತಿರುಗಿ ನೋಡಿದ್ದಾಳೆ.

ಆಗ ರಸ್ತೆಯಲ್ಲಿ ವೇಗವಾಗಿ ಲಾರಿಯೊಂದು ಬರುತ್ತಿರುವುದು ಅವಳಿಗೆ ಕಾಣಿಸಿದೆ. ಅದೇ ದಿಕ್ಕಿನಲ್ಲಿ ರಸ್ತೆಯಲ್ಲಿ ಮಧ್ಯದಲ್ಲಿ ನರಸಿಂಹ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ನೋಡಿದ್ದಾಳೆ. ಅವರನ್ನು ಕೂಗಿ ಕರೆದಿದ್ದಾಳೆ. ಆದರೆ ಫೋನ್‌ನಲ್ಲಿ ಮಗ್ನರಾಗಿದ್ದ ನರಸಿಂಹಗೆ ಜಾನು ಕರೆದದ್ದು ಕೇಳಿಸಿಲ್ಲ...