Bengaluru, ಏಪ್ರಿಲ್ 1 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಮಾರ್ಚ್ 31ರ ಸಂಚಿಕೆಯಲ್ಲಿ ಸೌಪರ್ಣಿಕಾ ಗಂಡನನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿದ್ದಾಳೆ. ಆಕ್ಸಿಡೆಂಟ್ ಮಾಡಿದವನನ್ನು ಒಮ್ಮೆ ನೋಡಬೇಕು ಎನ್ನುವುದು ಅವಳ ಗುರಿಯಾಗಿದೆ, ಅದಕ್ಕಾಗಿ ಎಸ್‌ಪಿ ಸಾಹೇಬರ ಜತೆ ಜಗಳವಾಡಿದ್ದಾಳೆ. ಆರೋಪಿಯನ್ನು ನೋಡದೇ ಇಲ್ಲಿಂದ ಹೋಗುವುದಿಲ್ಲ ಎಂದು ಕುಳಿತಿದ್ದಾಳೆ. ಹೀಗಾಗಿ ಕೊನೆಗೆ ಅವಳ ಒತ್ತಡಕ್ಕೆ ಮಣಿದ ಎಸ್‌ಪಿ, ಠಾಣೆಯ ಸೆಲ್ ತೆಗೆದು ತೋರಿಸಿದ್ದಾರೆ. ಅಲ್ಲಿ ಬಂಧಿತ ಆರೋಪಿ ಇರುವುದಿಲ್ಲ, ಅವನನ್ನು ಕೋರ್ಟ್‌ಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ಹೇಳುತ್ತಾರೆ. ಪೊಲೀಸರು ಮತ್ತೊಂದೆಡೆ ವೆಂಕಿಯನ್ನು ಉಪಾಯದಿಂದ ಹೊರಗಡೆ ಕರೆದುಕೊಂಡು ಹೋಗಿದ್ದಾರೆ. ಹೀಗಾಗಿ ಸೌಪರ್ಣಿಕಾಗೆ ಅವನನ್ನು ನೋಡಲು ಸಾಧ್ಯವಾಗುವುದಿಲ್ಲ.

ಸೌಪರ್ಣಿಕಾ ಭಾವನಾಗೆ ಕರೆ ಮಾಡಿ, ಪೊಲೀಸ್ ಸ್ಟೇಶನ್‌ಗೆ ಹೋಗಿರುವ ವಿಚಾರ ತಿಳಿಸಿದ್ದಾಳೆ. ಅತ್ತ ಭಾವನಾ ಕೂಡ ಆರೋಪಿಯನ್ನು ನೋಡಲು ಉತ್ಸುಕಳಾಗಿದ್ದಾಳೆ. ಹೀಗಾಗಿ ಅವಳು ಸಿದ್ದೇಗೌ...