Bengaluru, ಏಪ್ರಿಲ್ 23 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮಂಗಳವಾರ ಏಪ್ರಿಲ್ 22ರ ಸಂಚಿಕೆಯಲ್ಲಿ ಜಯಂತ ಮನೆಗೆ ವಾಪಸ್ ಹೋದ ಬಳಿಕ ಅವನಿಗೆ ಚಿನ್ನುಮರಿ ಜಾಹ್ನವಿಯದ್ದೇ ಚಿಂತೆಯಾಗಿದೆ. ಅವನು ನರಸಿಂಹನ ಮನೆಯಲ್ಲಿ ಕಾಫಿ ಕುಡಿದ ಬಳಿಕ ಅವನಿಗೆ ಅದು ಕಾಫಿಯನ್ನು ಚಿನ್ನುಮರಿಯೇ ಮಾಡಿರಬಹುದು ಎಂದು ಬಲವಾದ ಸಂಶಯ ಉಂಟಾಗಿದೆ. ಅದೇ ಯೋಚನೆಯಲ್ಲಿ ಇದ್ದವನು, ಶಾಂತಮ್ಮ ಬಂದಾಗಲೂ ಅವರ ಬಳಿ ವಿಷಯ ತಿಳಿಸಿದ್ದಾನೆ, ಹಾಗೆ ಕಾಫಿ ಮಾಡಲು ಜಾಹ್ನವಿಗೆ ಮಾತ್ರ ಸಾಧ್ಯ. ಅವಳು ಇಲ್ಲದೆ ಬೇರೆ ಯಾರಿಂದಲೂ ಅಷ್ಟು ರುಚಿಯಾಗಿ ಕಾಫಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಅವರು, ನಿನಗೆ ದಿನಪೂರ್ತಿ ಅವಳದೇ ಯೋಚನೆ ಅಲ್ಲವೇ, ಹೀಗಾಗಿ ಅವಳದೇ ನೆನಪಾಗಿರುತ್ತದೆ ಎಂದು ಹೇಳುತ್ತಾರೆ. ಆದರೂ ಜಯಂತನ ಮನಸ್ಸಿನಲ್ಲಿ ಸಂಶಯ ಕಡಿಮೆಯಾಗಿಲ್ಲ.

ಇತ್ತ ಮನೆಯಲ್ಲಿ ಜಾಹ್ನವಿ 11ನೇ ದಿನದ ಕಾರ್ಯಕ್ಕೆ ತಯಾರಿ ನಡೆಯುತ್ತಿರುತ್ತದೆ. ಶ್ರೀನಿವಾಸ್ ಮನೆಯಲ್ಲಿ ಎಲ್ಲರನ್ನೂ ಕರೆದು, ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಿ, ಎಲ್ಲರೂ ಪರಸ್ಪರ ...