Bengaluru, ಮಾರ್ಚ್ 29 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಮಾರ್ಚ್ 28ರ ಸಂಚಿಕೆಯಲ್ಲಿ ಜಾಹ್ನವಿ ಮತ್ತು ಭಾವನಾ ಖುಷಿಖುಷಿಯಾಗಿ ಶ್ರೀಲಂಕಾದ ಸುಂದರ ಪ್ರವಾಸಿ ತಾಣಗಳಲ್ಲಿ ಸುತ್ತಾಡಿದ್ದಾರೆ. ಜಯಂತ್ ಮತ್ತು ಜಾಹ್ನವಿ ಜತೆ ಊಟಕ್ಕೆ ಭಾವನಾ ಮತ್ತು ಸಿದ್ದೇಗೌಡರು ಜತೆಯಾಗಿದ್ದಾರೆ. ಇಬ್ಬರೂ ಊಟವನ್ನು ಖುಷಿಯಿಂದ ಸವಿದು, ಎಂಜಾಯ್ ಮಾಡಿದ್ದಾರೆ. ನಂತರ ತಮ್ಮ ತಮ್ಮ ರೂಮ್‌ಗಳಿಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಜಾಹ್ನವಿಗೆ ಜಯಂತ್‌ ಬಗ್ಗೆ ಮತ್ತೆ ಸಂಶಯ ಶುರುವಾಗಿದೆ. ಆದರೂ ಅವಳು ಅದನ್ನು ತೋರಿಸಿಕೊಟ್ಟಿಲ್ಲ. ಹೋಟೆಲ್ ರೂಮ್‌ಗೆ ಬಂದ ಕೂಡಲೇ ಅವಳು ಜಯಂತ್‌ನನ್ನು ನಯವಾಗಿ ಮಾತನಾಡಿಸಿದ್ದಾಳೆ.

ಜಯಂತ್ ಜತೆ ಮಾತನಾಡುತ್ತಾ, ತನಗೆ ಕೊಡುತ್ತಿರುವ ಮಾತ್ರೆಯ ಬಗ್ಗೆ ಜಾಹ್ನವಿ ತಿಳಿದುಕೊಂಡಿದ್ದಾಳೆ. ಬಳಿಕ ಉಪಾಯದಿಂದ ಜಾಹ್ನವಿ, ಜಯಂತ್‌ಗೆ ಮತ್ರೆ ತಿನ್ನಿಸಿದ್ದಾಳೆ. ಮಾತ್ರೆ ತಿಂದ ಜಯಂತ್, ನಿದ್ದೆ ಹೋಗಿದ್ದಾನೆ. ನಂತರ ಜಾಹ್ನವಿ, ಮೆಲ್ಲನೇ ಎದ್ದು ಹೊರಗಡೆ ಹೋಗಿದ್ದಾಳೆ. ಅಲ್ಲಿ ಅವಳು ಸಚಿನ್‌ನ...