ಭಾರತ, ಏಪ್ರಿಲ್ 21 -- ಜಮ್ಮು ಕಾಶ್ಮೀರದ ರಂಬಾನ್ ಜಿಲ್ಲೆಯಲ್ಲಿ ಉಂಟಾದ ಪ್ರಾಕೃತಿಕ ವಿಕೋಪದಿಂದಾಗಿ 3 ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿ ಇದ್ದಕ್ಕಿದ್ದ ಹಾಗೆ ಭಾರಿ ಮಳೆ ಸುರಿದಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಅಲ್ಲದೇ ಹಲವೆಡೆ ಭೂಕುಸಿತ ಕೂಡ ಎದುರಾಗಿತ್ತು. ಶನಿವಾರ (ಏಪ್ರಿಲ್ 19)ರ ರಾತ್ರಿಯಿಂದ ಭಾನುವಾರ (ಏಪ್ರಿಲ್ 20) ಬೆಳಗಿನ ಜಾವದವರೆಗೆ ನಿರಂತರ ಮಳೆ ಸುರಿದಿದ್ದು ಪ್ರವಾಹ ಪರಿಸ್ಥಿತಿ ಎದುರಾಗಿತ್ತು, ಮಾತ್ರವಲ್ಲ ಅಲ್ಲಲ್ಲಿ ಭೂಕುಸಿತ ಕೂಡ ಉಂಟಾಗಿದೆ.

ಈ ಘಟನೆಯಿಂದಾಗಿ ಹಲವು ಮನೆಗಳಿಗೆ ಹಾನಿಯಾಗಿದೆ. ಜಮ್ಮು ಹಾಗೂ ಶ್ರೀನಗರ ಹೆದ್ದಾರಿಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಇಬ್ಬರು ಅಪ್ರಾಪ್ತ ಸಹೋದರರು ಹಾಗೂ 60 ವರ್ಷದ ವೃದ್ಧ ಸೇರಿ ಮೂವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಗ್ನಾ ಗ್ರಾಮದಲ್ಲಿ ಮನೆಗಳು ಕೊಚ್ಚಿ ಹೋಗಿದ್ದವು, ಈ ಸಂದರ್ಭ ಮೂವರು ಸಾವನ್ನಪ್ಪಿದ್ದರು.

ಈ ಹವಾಮಾನ ವೈಪರೀತ್ಯದಿಂದಾಗಿ ಈ ಪ್ರದೇಶಕ್ಕೆ ವ್ಯಾಪಕ ಹಾನಿಯಾಗಿದ್ದು, ಹಲವಾರು ವಾಹನಗಳು ನಾಶವಾಗಿದ್ದು, 30 ...