ಭಾರತ, ಏಪ್ರಿಲ್ 22 -- ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹಲವು ಜನರು ಮೃತಪಟ್ಟಿದ್ದಾರೆ. ಈ ಸಂಖ್ಯೆ ಏರಿಕೆ ಕಾಣುವ ಆತಂಕವೂ ಇದೆ. ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಪ್ರವಾಸಿಗರ ಮೇಲೆ ನಡೆದ ದಾಳಿಯ ಕುರಿತು ಜನರ ಆಕ್ರೋಶ ಕಟ್ಟೆಯೊಡೆದಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಕುರಿತು ನೆಮ್ಮದಿಯಾಗಿ ಮಲಗುವುದು ಹೇಗೆ? ಈ ಸಮಸ್ಯೆಗೆ ಶಾಶ್ವತ ಪರಿಹಾರವಿಲ್ಲವೇ ? ಎಂದು ಜನರು ಚರ್ಚಿಸುತ್ತಿದ್ದಾರೆ.

"ಭಯೋತ್ಪಾದಕರ ದಾಳಿಯನ್ನು ಮಾತಿನಲ್ಲಿ ಖಂಡಿಸುವುದಲ್ಲ;ದಂಡನೆಯೇ ಆಗಬೇಕಾದ್ದು. ಮಾತಿನ ಖಂಡನೆಗೆ ಸ್ಪಂದಿಸುವವರು ಭಯೋತ್ಪಾದಕರಾಗುವುದಿಲ್ಲ. ಬಂದೂಕು ಇರುವವರೊಂದಿಗೆ ನಿರಾಯುಧರು ಮಾತಾಡಲು ಆಗುವುದಿಲ್ಲ‌. ಆದರೆ ಎಲ್ಲ ನಿರಾಯುಧರ ಪರವಾಗಿ ಆಯುಧ ಹಿಡಿದಿರುವ ಸರ್ಕಾರ ಮುಲಾಜಿಲ್ಲದೆ ತನ್ನ ಬಳಿ ಇರುವ ಆಯುಧವನ್ನು ಬಳಸಬೇಕು, ಬಳಸುತ್ತದೆ ಎಂಬ ನಿರೀಕ್ಷೆ." ಎಂದು ಅರವಿಂದ ಚೊಕ್ಕಾಡಿ ಸೋಷಿಯಲ್‌ ಮೀಡಿಯಾದಲ್ಲಿ ಬರೆದಿದ್ದಾರೆ.

ನಮ್ಮಲ್ಲಿ ಈಗ ಮೈ ಮೇಲೆ ಜನಿವಾರ ಇದೆಯಾ, ಕಿವಿಯೋಲೆ ಕೈ ಬಳೆ ಇ...