Bengaluru, ಮೇ 9 -- ಜಮ್ಮು: ಜಮ್ಮುವಿನ ಸಾಂಬಾ ಸೆಕ್ಟರ್ ಮೂಲಕ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ನಿಷೇಧಿತ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್‌ಗೆ ಸೇರಿದ ಏಳು ಜನ ನುಸುಳುಕೋರರನ್ನು ಗಡಿ ಭದ್ರತಾ ಪಡೆ ಗುರುವಾರ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಹತ್ಯೆಗೈದಿದೆ. ಕಾರ್ಯಾಚರಣೆಯ ಸಮಯದಲ್ಲಿ, ಬಿಎಸ್ಎಫ್ ಪಾಕಿಸ್ತಾನ ರೇಂಜರ್ಸ್ ಗಡಿ ಹೊರಠಾಣೆಗೆ ವ್ಯಾಪಕ ಹಾನಿಯನ್ನುಂಟು ಮಾಡಿದೆ. ಅದರ ಮೂಲಕ ಪಾಕಿಸ್ತಾನ, ಒಳನುಸುಳುವವರನ್ನು ಬೆಂಬಲಿಸುತ್ತಿತ್ತು ಮತ್ತು ಅವರಿಗೆ ಸುಲಭ ಪ್ರವೇಶಕ್ಕೆ ಅನುವು ಮಾಡಿಕೊಡುತ್ತಿತ್ತು.

ಜಮ್ಮು ಫ್ರಾಂಟಿಯರ್ ಬಿಎಸ್ಎಫ್‌ನ ಸಾಂಬಾ ಸೆಕ್ಟರ್‌ನಲ್ಲಿ, 2025 ರ ಮೇ 8 ಮತ್ತು 9 ರ ಮಧ್ಯರಾತ್ರಿಯಲ್ಲಿ, ಭಯೋತ್ಪಾದಕರ ದೊಡ್ಡ ಗುಂಪಿನ ಒಳನುಸುಳುವಿಕೆ ಪ್ರಯತ್ನವನ್ನು ತಡೆಹಿಡಿಯಲಾಗಿದೆ, ಉಗ್ರರ ಕೃತ್ಯವನ್ನು ಕಣ್ಗಾವಲು ಗ್ರಿಡ್ ಪತ್ತೆ ಮಾಡಿದೆ. ಈ ಒಳನುಸುಳುವಿಕೆ ಪ್ರಯತ್ನವನ್ನು ಬಿಎಸ್ಎಫ್‌ನ ಜಾಗೃತ ಪಡೆಗಳು ತಡೆದಿದ್ದು, ಕನಿಷ್ಠ 7 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಮತ್ತು ಉಗ್ರರಿಗೆ ...