ಭಾರತ, ಮೇ 25 -- ಭಾರತ ಈಗ ಜಗತ್ತಿನ ನಾಲ್ಕನೇ ಅತಿದೊಡ್ಡ ಅರ್ಥ ವ್ಯವಸ್ಥೆ. 5 ಲಕ್ಷ ಕೋಟಿ ಡಾಲರ್ ಅರ್ಥ ವ್ಯವಸ್ಥೆಯನ್ನಾಗಿ ರೂಪಿಸಬೇಕು ಎಂಬ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಮೈಲಿಗಲ್ಲು ಎನ್ನುವಂತಹ ಫಲ ಸಿಕ್ಕಿದ್ದು, ಭಾರತದ ಆರ್ಥಿಕ ವ್ಯವಸ್ಥೆ ಈಗ 4 ಲಕ್ಷ ಕೋಟಿ ಡಾಲರ್ ಗಡಿ ದಾಟಿದೆ. ಜಪಾನ್ ಆರ್ಥಿಕ ವ್ಯವಸ್ಥೆಯನ್ನು ಹಿಂದಿಕ್ಕಿದ ಭಾರತ ಈಗ ಜಗತ್ತಿನ ನಾಲ್ಕನೇ ಅರ್ಥ ವ್ಯವಸ್ಥೆಯಾಗಿ ವಿರಾಜಮಾನವಾಗಿದೆ. ಅಮೆರಿಕ, ಚೀನಾ ಮತ್ತು ಜರ್ಮನಿ ಈ ಮೂರು ರಾಷ್ಟ್ರಗಳು ಸದ್ಯ ಜಗತ್ತಿನ ಮುಂಚೂಣಿ ಆರ್ಥಿಕತೆಗಳು ಎಂದು ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಶನಿವಾರ ಅಧಿಕೃತವಾಗಿ ಘೋಷಿಸಿದರು. ನೀತಿ ಆಯೋಗದ 10ನೇ ಆಡಳಿತ ಮಂಡಳಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಚಾರ ಬಹಿರಂಗಪಡಿಸಿದರು.
ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ದತ್ತಾಂಶವನ್ನು ಉಲ್ಲೇಖಿಸಿದ ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ, ಜಾಗತಿಕ ಆರ್ಥಿಕ ವ್ಯವಸ್ಥೆ ಗಮನಿಸುವಾಗ ಜಪಾನ್ ದೇಶದ ಆರ್ಥಿಕ ವ್ಯವಸ್ಥೆಯನ್ನು ಭಾರತ ಹಿಂದಿಕ್ಕಿರುವುದ...
Click here to read full article from source
To read the full article or to get the complete feed from this publication, please
Contact Us.