ಭಾರತ, ಮೇ 13 -- 2026 ರ ಶೈಕ್ಷಣಿಕ ವರ್ಷದಲ್ಲಿ ಜಪಾನ್ ಸರ್ಕಾರದ ಶಿಕ್ಷಣ, ಸಂಸ್ಕೃತಿ, ಕ್ರೀಡೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ (MEXT)ದ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸಿದೆ. ವಿವಿಧ ದೇಶಗಳ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ವಿದ್ಯಾರ್ಥಿವೇತನದ ಮೂಲಕ ಜಪಾನ್‌ ದೇಶದಲ್ಲಿ ಸಂಪೂರ್ಣ ಆರ್ಥಿಕ ಬೆಂಬಲದೊಂದಿಗೆ ಉನ್ನತ ಶಿಕ್ಷಣವನ್ನು ಪಡೆಯುವ ಕನಸು ನನಸಾಗಿಸಲು ಈ ಸ್ಕಾಲರ್‌ಶಿಪ್ ಮೂಲಕ ಅವಕಾಶ ಪಡೆಯಬಹುದು. ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರೆದಿರುವ ಜಪಾನ್‌ನಲ್ಲಿ ಅಧ್ಯಯನ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ, MEXT ವಿದ್ಯಾರ್ಥಿವೇತನವು ಗುಣಮಟ್ಟದ ಉನ್ನತ ಶಿಕ್ಷಣವನ್ನು ಪಡೆಯಲು ಅಮೂಲ್ಯ ಅವಕಾಶವನ್ನು ನೀಡುತ್ತದೆ.

ಜಪಾನ್ ಸರ್ಕಾರದ ಧನಸಹಾಯದೊಂದಿಗೆ ಈ ವಿದ್ಯಾರ್ಥಿವೇತನವು ಪದವಿಪೂರ್ವ, ಸ್ನಾತಕೋತ್ತರ ಪದವಿ ಮಾತ್ರವಲ್ಲದೆ ಡಾಕ್ಟರೇಟ್ ಹಾಗೂ ವಿಶೇಷ ತರಬೇತಿ ಮತ್ತು ಸಂಶೋಧನಾ ಅಧ್ಯಯನಗಳು ಸೇರಿದಂತೆ ವಿವಿಧ ಶೈಕ್ಷಣಿಕ ಹಂತಗಳಲ್ಲಿ ವಿದೇಶಗಳ ವಿದ್ಯಾರ್ಥಿಗ...