ಭಾರತ, ಫೆಬ್ರವರಿ 16 -- Opinion : ಕ್ಷಿಪ್ರವಾಗಿ ಶ್ರೀಮಂತರಾಗಬೇಕು ಎಂಬುದು ಬಹುತೇಕರ ಕನಸು. ಪರಿಶ್ರಮವಿಲ್ಲದೇ ಸುಲಭವಾಗಿ ಹೇಗೆ ಶ್ರೀಮಂತರಾಗವುದು ಎಂದು ಹುಡುಕಾಡುವವರನ್ನು ಜೂಜು ಬಹುಬೇಗ ಸೆಳೆದುಬಿಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಜೂಜಿನ ಸ್ಥಾನವನ್ನು ತುಂಬಿವೆ. ರಮ್ಮಿ, ರಮ್ಮಿ ಸರ್ಕಲ್ ಹೀಗೆ ಹತ್ತಾರು ಆಪ್‌ಗಳು ಮೊಬೈಲ್‌ನಲ್ಲೇ ಕಾಣಸಿಗುತ್ತವೆ. ಅದರ ಆಕರ್ಷಣೆಗೆ ಬಿದ್ದವರು ಸಾಲ ಮಾಡಿ ಆಡತೊಡಗುತ್ತಾರೆ. ಎಲ್ಲವನ್ನೂ ಕಳೆದುಕೊಂಡು ಬಳಿಕ ಸಾಲದ ಸುಳಿಗೆ ಸಿಲುಕಿ ಸಂಕಷ್ಟ ಎದುರಿಸುತ್ತಾರೆ. ಇದರು ವಾಸ್ತವ. ಆದರೆ, ಜನರ ಭಾಗ್ಯವೇ ತನ್ನ ಗುರಿ ಎನ್ನುತ್ತಿರುವ ಕರ್ನಾಟಕ ಸರ್ಕಾರಕ್ಕೆ ಬೆಟ್ಟಿಂಗ್ ಆಪ್‌ ನಿಷೇಧಿಸಲು ಅಡ್ಡಿ ಏನು ಎಂಬುದು ಉದ್ಯಮಿ ರವಿ ಅರೇಹಳ್ಳಿ ಅವರ ಕಾಳಜಿಯ ಪ್ರಶ್ನೆ. ಅವರು ಅದನ್ನು ವಿವರಿಸಿರುವುದು ಹೀಗೆ -

ಅವರ ಹೆಸರು ದೇವರಾಜ. ಪರಿಣಿತ ಕಾರ್ ಡ್ರೈವರ್. ಎಲ್ಲಕ್ಕಿಂತ ಮಿಗಿಲಾಗಿ ಶ್ರಮ ಜೀವಿ. ಯಾವುದೇ ದುರಭ್ಯಾಸಗಳಿರಲಿಲ್ಲ. ಮದುವೆಯಾಗಿ ವರ್ಷಾರುತಿಂಗಳು.

ನಾ...