ಭಾರತ, ಫೆಬ್ರವರಿ 14 -- ಬೆಂಗಳೂರು: ಪ್ರೇಮಿಗಳ ದಿನದಂದು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ ಗುಡ್‌ ನ್ಯೂಸ್‌ ಕೊಟ್ಟಿದೆ. ಪ್ರಯಾಣ ದರ ಏರಿಕೆಯ ನಂತರ ವ್ಯಾಪಕ ವಿರೋಧದ ಬೆನ್ನಲ್ಲೇ ಟಿಕೆಟ್‌ ದರವನ್ನು ಅಲ್ಪ ಪ್ರಮಾಣದಲ್ಲಿ ಇಳಿಸಲಾಗಿದೆ. ಮೆಟ್ರೋ ಟಿಕೆಟ್‌ನ ಕನಿಷ್ಠ ಹಾಗೂ ಗರಿಷ್ಠ ದರ ಹಾಗೆಯೇ ಇರಲಿದೆ. ಆದರೆ, ಕೆಲವು ಸ್ಟೇಷನ್‌ಗಳಿಗೆ ಇರುವ ಟಿಕೆಟ್‌ ಬೆಲೆಯಲ್ಲಿ 10 ರೂ ಇಳಿಸಲಾಗಿದೆ. ಇದು ನಿತ್ಯದ ಪ್ರಯಾಣಿಕರಿಗೆ ತುಸು ನೆಮ್ಮದಿ ತರಿಸಿದೆ.

ಟಿಕೆಟ್‌ ದರದಲ್ಲಿ ದೊಡ್ಡ ಬದಲಾವಣೆ ಇಲ್ಲ. ಕನಿಷ್ಠ ಬೆಲೆ 10 ರೂ ಹಾಗೂ ಗರಿಷ್ಠ ಬೆಲೆ 90 ರೂ ಹಾಗೆಯೇ ಇರಲಿದೆ. ಆದರೆ ಕೆಲವು ದೂರಗಳಿಗೆ ಏರಿಸಿದ್ದ ಬೆಲೆಯಲ್ಲಿ ಗರಿಷ್ಠ 10 ರೂ ಇಳಿಸಲಾಗಿದೆ. ಟಿಕೆಟ್‌ ದರ ಏರಿಕೆ ಕುರಿತು ಸಾರ್ವಜನಿಕರ ವಿರೋಧ ವ್ಯಕ್ತವಾಗಿದ್ದ ಬೆನ್ನಲ್ಲೇ, ಗುರುವಾರ (ಫೆ.13) ಬಿಎಂಆರ್‌ಸಿಎಲ್ ಎಂಡಿ ಮಹೇಶ್ವರ್ ರಾವ್ ಸುದ್ದಿಗೋಷ್ಠಿ ನಡೆಸಿ, ಟಿಕೆಟ್‌ ದರ ಇಳಿಕೆಗೆ ಸಾಧ್ಯವಾದಷ್ಟೂ ಪ್ರಯತ್ನಿಸುವುದಾಗಿ ಹೇಳಿದ್ದರು. ಸ್ಟೇಜ್‌ ಆಧಾರದಲ್ಲಿ ದರ ಇಳಿಕೆ ...