Mangalore, ಫೆಬ್ರವರಿ 11 -- ಮಂಗಳೂರು: ಸರಕಾರ ತನ್ನ ಖಜಾನೆ ತುಂಬಿಸಲು ಏನೇನು ಮಾಡಬೇಕು ಅಂಥದ್ದನ್ನೆಲ್ಲಾ ಮಾಡುವ ಹೊತ್ತಿಗೆ, ಮರಣ ಪ್ರಮಾಣಪತ್ರವನ್ನೂ ಬಿಟ್ಟಿಲ್ಲ. ಒಬ್ಬರು ಸತ್ತಿದ್ದಾರೆ ಎಂದು ಪ್ರಮಾಣಪತ್ರ ಪಡೆಯಬೇಕಾದರೆ, ದುಡ್ಡು ಮೊದಲಿಗಿಂತ ಹತ್ತುಪಟ್ಟು ಹೆಚ್ಚು ಕೊಡಬೇಕು, ಇಡೀ ರಾಜ್ಯದಲ್ಲೇ ಈ ಪರಿಸ್ಥಿತಿ ಕೆಲ ದಿನಗಳಿಂದ ಸದ್ದಿಲ್ಲದೆ ಉದ್ಭವವಾಗಿದೆ. ಕೆಲ ತಿಂಗಳ ಹಿಂದೆ ಇದ್ದ ಶುಲ್ಕ ಮತ್ತು ಈಗಿನ ಶುಲ್ಕ ಹಾಗೂ ತಿಂಗಳಿಗೆ ಮತ್ತು ವರ್ಷಕ್ಕೆ ವಿಧಿಸಲಾಗುವ ದರಪಟ್ಟಿಯನ್ನೇ ನೋಡಿ. ಜನನ ಮರಣ ಪತ್ರಕ್ಕೆ ಹಿಂದಿನ ಶುಲ್ಕ 5 ರೂ ಇತ್ತು, ಈಗ 50 ರೂ ಆಗಿದೆ. 5 ಪ್ರತಿಗೆ 25 ರೂ ಇತ್ತು. ಈಗ 250 ರೂ ಆಗಿದೆ. ತಿಂಗಳಿಗೆ ದಂಡ 2 ರೂ ಇತ್ತು, ಈಗ 20 ರೂ ಆಗಿದೆ. ವರ್ಷದ ದಂಡ 5 ರೂ ಇತ್ತು, ಈಗ 50 ರೂ ಆಗಿದೆ. ಸಾರ್ವಜನಿಕರೂ ಕೂಡ ದರ ಏರಿಕೆ ಮಾಡಿದ್ದನ್ನು ಇದೇ ರೀತಿ ಪ್ರಶ್ನಿಸುತ್ತಿದ್ದಾರೆ.

ಫೆಬ್ರವರಿ 4ರಿಂದ ಈ ಆದೇಶ ಜಾರಿಯಾಗಿದೆ. ರಾಜ್ಯ ಸರಕಾರ ಪಂಚಗ್ಯಾರಂಟಿಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದೆ ಎಂದು ಒಂದೆಡೆ ಹೇಳಿಕ...