Bangalore, ಮಾರ್ಚ್ 8 -- ಸಚಿವ ಈಶ್ವರ ಖಂಡ್ರೆ ಅವರೇ, ಕರ್ನಾಟಕದಲ್ಲಿ ಸುಮಾರು ಇನ್ನೂರು ಆನೆಗಳು ಅರಣ್ಯದಿಂದ ಹೊರಗಿವೆ ಅವುಗಳನ್ನು ಕಾಡಿಗೆ ಅಟ್ಟಲು ಪ್ರಯತ್ನಿಸುತ್ತೀವಿ ಎಂದು ಹೇಳಿದ್ದೀರಿ. ಅದು ವಾಸ್ತವಿಕವಾಗಿ ಸತ್ಯ. ಆದರೆ, ಆನೆಗಳು ಮತ್ತು ಇತರೆ ವನ್ಯಜೀವಿಗಳು ಕಾಡು ತ್ಯೆಜಿಸಿ ಏಕೆ ನಾಡಿಗೆ ಲಗ್ಗೆ ಇಡುತ್ತವೆ ಎಂಬುದನ್ನು ನಿಮ್ಮ ಇಲಾಖೆಯ ಪ್ರಧಾನ ಅರಣ್ಯಾಧಿಕಾರಿಗಳು ಎಂಬ ಅವಿವೇಕಿಗಳು ನಿಮಗೆ ಸಮಗ್ರ ಮಾಹಿತಿ ಒದಗಿಸಿಲ್ಲ.

ಬೆಂಗಳೂರು ಅರಣ್ಯಭವನದ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು, ಅರಣ್ಯದ ಬಗ್ಗೆ ಮಾಹಿತಿ ನೀಡುವ ಐ.ಎಫ್‌.ಎಸ್. ಅಧಿಕಾರಿಗಳಿಗೆ ಕರ್ನಾಟಕದ ಭೌಗೋಳಿಕ ವಾತಾವರಣ, ಇಲ್ಲಿನ ಅರಣ್ಯಗಳ ಸ್ಥಿತಿಗತಿ ಮತ್ತು ಮುಚ್ಚಿ ಹೋಗಿರುವ ಆನೆಗಳ ಕಾರಿಡಾರ್ ಬಗ್ಗೆ ಜ್ಞಾನವಿಲ್ಲ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ನನ್ನ ಸೊಸೆ, ಕಳೆದು ತಿಂಗಳು ನಿಮ್ಮ ಕುರಿತು ಮಾತನಾಡುತ್ತಾ, ಮಾಮಾ, ನಾನು ಈವರೆಗೆ ನೋಡಿದ ಅರಣ್ಯ ಸಚಿವರಲ್ಲಿ ಈಶ್ವರ ಖಂಡ್ರೆಯವರು ಶುದ್ಧ ಹಸ್ತರು. ಅಧಿಕಾರಿಗಳ ಸಭೆಯಲ್ಲಿ ಎಲ್ಲಾ ವಿಷಯಗಳನ್ನು...