Bangalore, ಮಾರ್ಚ್ 12 -- ಕಳೆದ ವಾರ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಾಲಿನ ಬಜೆಟ್‌ ಮಂಡಿಸಿದರು. ಅದರಲ್ಲಿ ಉನ್ನತ ಶಿಕ್ಷಣದ ವಲಯದ ಪ್ರಸ್ತಾಪ ಮಾಡುವಾಗ ಬೆಂಗಳೂರಿನಲ್ಲಿ ರೂಪಿಸಿರುವ ಹೊಸ ವಿಶ್ವವಿದ್ಯಾನಿಲಯದ ಪ್ರಸ್ತಾಪವೂ ಇತ್ತು. ಆ ವಿಶ್ವವಿದ್ಯಾನಿಲಯಕ್ಕೆ ಮಾಜಿ ಪ್ರಧಾನಿ ಮನಮೋಹನಸಿಂಗ್‌ ಅವರ ಹೆಸರನ್ನು ಇಟ್ಟು ವಿಶ್ವವಿದ್ಯಾನಿಲಯವನ್ನು ಉನ್ನತ ಕೇಂದ್ರವಾಗಿ ರೂಪಿಸಲಾಗುವುದು ಎಂದು ಪ್ರಸ್ತಾಪವನ್ನು ಮಾಡಲಾಗಿತ್ತು. ಕರ್ನಾಟಕ ಸರ್ಕಾರವು, ಬೆಂಗಳೂರು ನಗರದ ಹೊಸ ವಿದ್ಯಾನಿಲಯಕ್ಕೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಹೆಸರನ್ನು ನಾಮಕರಣ ಮಾಡಲು ಹೊರಟಿರುವುದು ತಪ್ಪು ಹೆಜ್ಜೆ. ಮನಮೋಹನ್ ಸಿಂಗ್ ಈ ಜಗತ್ತು ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞರು ಮತ್ತು ಪ್ರಾಮಾಣಿಕವಾಗಿ ಪ್ರಧಾನಿ ಹುದ್ದೆಯನ್ನು ನಿರ್ವಹಿಸಿದ ಮಹಾನ್ ವ್ಯಕ್ತಿ. ಅವರ ಹೆಸರನ್ನು ಯಾವುದಾದರೂ ಒಂದು ರಸ್ತೆ, ವರ್ತುಲ ಅಥವಾ ಹೊಸ ಬಡಾವಣೆಗೆ ಇಡುವುದು ಸೂಕ್ತ.

ಕಾಂಗ್ರೆಸ್ ನವರು ವಿ.ವಿ. ಗೆ ನಾಮಕರಣ ಮಾಡಲು ಪಕ್ಷದ ನಾಯಕರ ಹೆಸರು ಬಳಸಿಕೊಳ್ಳು...