ಭಾರತ, ಫೆಬ್ರವರಿ 6 -- Baba Vanga: ಭವಿಷ್ಯವಾಣಿ ನುಡಿಯುವುದರಲ್ಲಿ ಜಾಗತಿಕವಾಗಿ ಜನಪ್ರಿಯವಾಗಿರುವ ವಾಂಗೆಲಿಯಾ ಪಾಂಡೆವಾ ಗುಶ್ಟೆರೋವಾ ಅರ್ಥಾತ್ ಬಾಬಾ ವಂಗಾ ಎಂದು ಸಾಮಾನ್ಯವಾಗಿ ಕರೆಯುವ ಇವರು 1911 ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿದರು. ಬಾಲ್ಯದಿಂದಲೂ ಕುರುಡಾಗಿದ್ದ ಇವರು ಜಗತ್ತಿನಲ್ಲಿ ಮುಂದೆ ಏನೆಲ್ಲಾ ಆಗುತ್ತದೆ ಎಂದು ಭವಿಷ್ಯವಾಣಿ ನುಡಿಯುವ ಮೂಲಕ ಗಮನ ಸೆಳೆದಿದ್ದಾರೆ. ಬಲ್ಗೇರಿಯಾದ ಬೆಲಾಸಿಕಾ ಪರ್ವತಗಳ ರೂಪೈಟ್ ಪ್ರದೇಶದಲ್ಲಿ ತಮ್ಮ ಜೀವನದ ಬಹುಪಾಲ ಸಮಯವನ್ನು ಕಳೆದಿರುವ ಬಾಬಾ ವಂಗಾ, ನುಡಿದಿರುವ ಈವರೆಗಿನ ಎಲ್ಲಾ ಭವಿಷ್ಯವಾಣಿಗಳು ನಿಜವಾಗಿವೆ. ಹೀಗಾಗಿ ಮುಂದೆ ಏನೆಲ್ಲಾ ಆಗುತ್ತೆ ಎಂದು ನುಡುದಿರುವ ಬಗ್ಗೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳು ಹೆಚ್ಚಾಗಿವೆ.

ಸಾಮಾನ್ಯವಾಗಿ ಹೊಸ ವರ್ಷ ಆರಂಭವಾಗುತ್ತಿದ್ದಂತೆ ಆ ವರ್ಷದಲ್ಲಿ ಏನೆಲ್ಲಾ ಸಂಭವಿಸಬಹುದು, ಒಳ್ಳೆಯದು ಕೆಟ್ಟದ್ದು ಹೀಗೆ ಭವಿಷ್ಯವನ್ನು ನೋಡಲಾಗುತ್ತದೆ. ಬಾಬಾ ವಂಗಾ ಅವರ ಕೆಲವು ಭವಿಷ್ಯವಾಣಿಗಳು ಆಘಾತರಿಯಾಗಿವೆ. ಆದರೂ ಇವರು ಹೇಳಿರುವುದೆಲ್ಲಾ ನಿಜವಾ...